ಅನಕ್ಷರಸ್ಥ ಕುರಿಗಾಹಿಯೊಬ್ಬನ ಪರಿಸರ ಪ್ರೇಮ ಇಂದಿನ ಯುವಪೀಳಿಗೆಗೆ ಮಾದರಿಯಾಗುವಂತಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ತನ್ನದೇ ಸ್ವಂತ ದುಡ್ಡಿನಿಂದ ನೀರಿನ 14 ಹೊಂಡಗಳನ್ನ ನಿರ್ಮಿಸಿ ಆಧುನಿಕ ಭಗೀರಥ ಎನಿಸಿಕೊಂಡಿದ್ದಾನೆ.
82ವರ್ಷ ವಯಸ್ಸಿನ ಈ ವೃದ್ದ ಬೇಸಿಗೆ ಕಾಲದಲ್ಲಿ ನೀರು ಶೇಖರಿಸಲು ಹಾಗೂ ವನ್ಯಜೀವಿಗಳು ನೀರಿನ ದಾಹ ತೀರಿಸಿಕೊಳ್ಳಲು ಬೆಟ್ಟದ ತಪ್ಪಲುಗಳಲ್ಲಿ 14 ನೀರಿನ ಹೊಂಡಗಳನ್ನು ನಿರ್ಮಾಣ ಮಾಡಿದ್ದಾನೆ.
ಆಧುನಿಕ ಭಗೀರಥ ಕಾಮೇಗೌಡ ರ ಈ ಕಾರ್ಯಕ್ಕೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿದ್ದು, ಈತನ ಪರಿಸರ ಪ್ರೇಮ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.