ಸರ್ಕಾರ ಕೂಡಲೇ ಡಿಸೇಲ್ ದರ ಇಳಿಸಬೇಕು. ಇಲ್ಲದಿದ್ದರೆ ಅ. 28 ರಿಂದ ಅನಿರ್ದಿಷ್ಟಾವದಿ ಲಾರಿ ಮುಷ್ಕರ ನಡೆಸಲಾಗುವುದೆಂದು ಲಾರಿ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.
ಮಿತಿಮೀರಿದ ತೆರಿಗೆ ವಿಧಿಸುತ್ತಿರುವುದರಿಂದ ಲಾರಿ ಉದ್ಯಮ ಸಂಕಷ್ಟಕ್ಕೀಡಾಗಿದೆ. ಹೀಗಾಗಿ ಮುಷ್ಕರ ಅನಿವಾರ್ಯ ಆಗಿದೆ. ಆದ್ದರಿಂದ ಅ.23 ರಂದು ಸಭೆ ನಡೆಸಿ ರೂಪುರೇಶ ಸಿದ್ಧಪಡಿಸಲಾಗುವುದು ಎಂದು ಫೆಡರೇಶನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಏಜೆಂಟ್ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ.
ಸರ್ಕಾರ ತಿಂಗಳಾಂತ್ಯದಲ್ಲಿ 10 ರೂ. ವರೆಗೆ ಡಿಸೇಲ್ ಮೇಲಿನ ತೆರಿಗೆ ಇಳಿಸಬೇಕು. ಇಲ್ಲದಿದ್ದರೆ ಟೋಲ್ ಗಳಲ್ಲಿ ಲಾರಿಗಳನ್ನು ನಿಲ್ಲಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದರು.