Publish Date: Fri, 22 Feb 2019 (18:14 IST)
Updated Date: Fri, 22 Feb 2019 (18:17 IST)
ತೀವ್ರ ವಿರೋಧದ ನಡುವೆಯೂ ಸಾಹಿತ್ಯ ಸಮ್ಮೇಳನ ಸಮಾಪ್ತಿಗೊಂಡಿದೆ.
ಮೂರನೇ ದಿನಕ್ಕೆ ಕಾಲಿಟ್ಟಿದೆ ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ. ಕೇವಲ ಖಾಲಿ ಕುರ್ಚಿಗಳಿಗೆ ಸೀಮಿತವಾದ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸಮ್ಮೇಳನಕ್ಕೆ ಆಗಮಿಸಿದವರೆಲ್ಲ ಬೇಸರದಿಂದ ಹಿಂದಿರುಗುತ್ತಿದ್ದಾರೆ. ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ, ಬೇಸರದ ನುಡಿಯಿಂದ ಮೌನಿಗಳಾಗಿ ಮಾಯವಾಗುತ್ತಿದ್ದಾರೆ.
ಒಟ್ಟಾರೆಯಾಗಿ ಮೂರು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಕೇವಲ ಜಿಲ್ಲಾ ಅಧ್ಯಕ್ಷರ ಏಕಮುಖವಾಗಿತ್ತು.
ಸಾಕಷ್ಟು ಜನರ, ಸಂಘಟನೆಗಳ, ಸಾಹಿತ್ಯ ಅಭಿಮಾನಿಗಳ ಕಡಗಣನೆಯಿಂದ ಸಾಹಿತ್ಯ ಸಮ್ಮೇಳನ ತೂಕ ಕಳೆದು ಕೊಂಡಂತಾಗಿದೆ.