Publish Date: Tue, 29 Jan 2019 (18:09 IST)
Updated Date: Tue, 29 Jan 2019 (18:11 IST)
ಕಾಂಗ್ರೆಸ್ ಶಾಸಕರ ವರ್ತನೆ ಸವತಿ ಮಕ್ಕಳಂತೆ ಇದೆ ಎಂದ ಶಾಸಕರೊಬ್ಬರು ದೂರಿದ್ದಾರೆ.
ಮಂಡ್ಯದಲ್ಲಿ ಶಾಸಕ ಸುರೇಶ್ ಗೌಡ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಶಾಸಕರ ವರ್ತನೆಯನ್ನ ಬಹಳದಿನದಿಂದ ನಾವು ಗಮನಿಸುತ್ತಿದ್ದೇವೆ. ಅವರು ದೊಡ್ಡಣ್ಣ ರೀತಿ ವರ್ತಿಸದೇ ಸವತಿ ಮಕ್ಕಳ ರೀತಿ ವರ್ತಿಸುತ್ತಿದ್ದಾರೆ. ಇದರಿಂದ ನಮಗೇನು ನಷ್ಟ ಆಗೋದಿಲ್ಲ. ನಮಗೆ ಯಾರು ಅನಿವಾರ್ಯ ಅಲ್ಲ. ನಾವು ಎಲ್ಲರಿಗೂ ಅನಿವಾರ್ಯ ಅನ್ನೋ ಪರಿಸ್ಥಿತಿ ಇದೆ.
ಇದನ್ನ ಮಿತ್ರ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಯಾರನ್ನೋ ಮೆಚ್ಚಿಸಲಿಕ್ಕೆ ನಮ್ಮ ನಾಯಕರನ್ನ ಅವಹೇಳನ ಮಾಡೋದನ್ನ ಮುಂದುವರೆಸಿದರೆ ಅದರ ಫಲವನ್ನ ಅವರೇ ಅನುಭವಿಸುತ್ತಾರೆ ಎಂದ ಅವರು, ನಾವು ಅಧಿಕಾರಕ್ಕೆ ಅಂಟಿ ಕೂರುವವರಲ್ಲ, ನಾವು ಎಲ್ಲದಕ್ಕೂ ರೆಡಿಯಿದ್ದೀವಿ ಎಂದಿದ್ದಾರೆ.