Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೈಕ್ ಆಸೆಗೆ ಮದುವೆಯಾದ ಮರುದಿನವೇ ತಲಾಕ್ ನೀಡಿದ ಭೂಪ

ಬೈಕ್ ಆಸೆಗೆ ಮದುವೆಯಾದ ಮರುದಿನವೇ ತಲಾಕ್ ನೀಡಿದ ಭೂಪ
ಲಕ್ನೋ , ಸೋಮವಾರ, 15 ಜುಲೈ 2019 (13:46 IST)
ಮದುವೆಯಾದ ಮರುದಿನವೇ ವರಮಹಾಶಯನೊಬ್ಬ ತನ್ನ ಪತ್ನಿಗೆ ತಲಾಖ್ ನೀಡಿರೋ ಘಟನೆ ನಡೆದಿದೆ.

ವಧುವಿನ ಪಾಲಕರು ಮದುವೆ ದಿನ ವರದಕ್ಷಿಣೆ ನೀಡಿದ್ರು. ಆದರೆ  ಮದುವೆ ಮುಗಿದ ಮಾರನೇ ದಿನ ವರ ತನಗೆ ಬೈಕ್ ಬೇಕು ಅಂತ ಬೇಡಿಕೆ ಇಟ್ಟಿದ್ದಾನೆ.

ವಧುವಿನ ಮನೆಯವರು ಮನವೊಲಿಸಿದ್ರೂ ಕೇಳದ ಗಂಡ, ತನ್ನ ಪತ್ನಿಗೆ ತಲಾಖ್ ನೀಡಿದ್ದಾನೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದ್ದು, ಉಸ್ಮಾನ್ ಗನಿ – ರುಕ್ಸಾನಾ ರ ನಡುವೆ ಮದುವೆ ನಡೆದಿತ್ತು.

ಮದುವೆ ನಡೆದ ಮಾರನೇ ದಿನವೇ ತಲಾಖ್ ನೀಡಿದ್ದರಿಂದ ರುಕ್ಸಾನಾರ ಕುಟುಂಬದವರು ಇದೀಗ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನೀರಿನ ಟ್ಯಾಂಕ್ ಗೆ ವಿಷ ಬೆರಕೆ: 10 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ