ಬೆಂಗಳೂರು : ಫುಟ್ ಪಾತ್ ಮೇಲೆ ನಿಂಬೆ ಹಣ್ಣಿನ ಅಂಗಡಿ ಹಾಕಲು 4 ಅಡಿ ಜಾಗದ ವಿಚಾರಕ್ಕೆ ವ್ಯಾಪಾರಿಯೊಬ್ಬರನ್ನು ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಕೆಆರ್ ಮಾರುಕಟ್ಟೆನಲ್ಲಿ ನಡೆದಿದೆ.
ಭರತ್ ಹತ್ಯೆಯಾದ ವ್ಯಾಪಾರಿ. ಭರತ್ ಕುಟುಂಬ 40 ವರ್ಷಗಳಿಂದ ಮಾರುಕಟ್ಟೆಯಲ್ಲಿ ನಿಂಬೆಹಣ್ಣು ವ್ಯಾಪಾರ ಮಾಡುತ್ತಿದ್ದು, ಫುಟ್ ಪಾತ್ ಮೇಲೆ ನಿಂಬೆ ಹಣ್ಣಿನ ಅಂಗಡಿ ಹಾಕಲು 4 ಅಡಿ ಜಾಗಕ್ಕೆ ದಿನಕ್ಕೆ 500 ರೂ. ಕೊಡಬೇಕೆಂದು ರೌಡಿಶೀಟರ್ ಸಹಚರರು ಕಿರುಕುಳ ನೀಡುತ್ತಿದ್ದರು.ಈ ವಿಚಾರಕ್ಕೆ ರೌಡಿಶೀಟರ್ ಸಹಚರರು ಹಾಗೂ ಭರತ್ ನಡುವೆ ದಿನ ಜಗಳ ನಡೆಯುತ್ತಿತ್ತು.
ಈ ಹಿನ್ನಲೆಯಲ್ಲಿ ವ್ಯಾಪಾರಿ ಭರತ್ ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಕೆ.ಆರ್. ಮಾರ್ಕೆಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮಕೈಗೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.