ನವದೆಹಲಿ : 4ನೇ ಹಂತದ ಲಾಕ್ ಡೌನ್ ಜಾರಿಗೆ ತರುವ ವಿಚಾರಕ್ಕೆ ಸಂಬಂಧಸಿದಂತೆ ರಾಜ್ಯ ಸರ್ಕಾರಗಳು ಇಂದು ಕೇಂದ್ರಕ್ಕೆ ಬ್ಲೂಪ್ರಿಂಟ್ ಸಲ್ಲಿಕೆ ಮಾಡಿವೆ.
ಲಾಕ್ ಡೌನ್ ಮುಂದುವರಿಕೆಯ ಬಗ್ಗೆ ಲಿಖಿತ ವರದಿ ನೀಡುವಂತೆ ಪ್ರಧಾನಿ ಮೋದಿ ತಿಳಿಸಿದ ಹಿನ್ನಲೆಯಲ್ಲಿ ಕೇಂದ್ರ ಗೃಹ ಇಲಾಖೆಗೆ ರಾಜ್ಯ ಸರ್ಕಾರಗಳ ವರದಿ ಸಲ್ಲಿಸಿವೆ.
ರಾಜ್ಯಗಳ ಅಭಿಪ್ರಾಯ ಆಧರಿಸಿ ಮಾರ್ಗಸೂಚಿಗಳ ಪರಿಷ್ಕರಣೆ. ಮಾಡಿದ್ದು, ಈಗಾಗಲೇ ದೆಹಲಿ ಸರ್ಕಾರ ಒಂದು ವರದಿ ನೀಡಿದೆ. ಅದೇರಿಥಿ ಕರ್ನಾಟಕ, ಕೇರಳ, ತಮಿಳುನಾಡು, ಉತ್ತರ ಪ್ರದೇಶ, ಸೇರಿ ಈಶಾನ್ಯ ಭಾರತದ ಹಲವು ರಾಜ್ಯಗಳಿಂದ ವರದಿ ಸಲ್ಲಿಕೆಯಾಗಿದೆ ಎನ್ನಲಾಗಿದೆ.