ಇಸ್ರೋ ವಿಜ್ಞಾನಿಯೊಬ್ಬರನ್ನ ಅವರ ನಿವಾಸದೊಳಗೆ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ಎಸ್.ಸುರೇಶ್ (55) ಕೊಲೆಯಾದವರು.
ಹೈದರಾಬಾದ್ ಅಮೀರ ಪೇಟದಲ್ಲಿರೋ ಅಪಾರ್ಟ್ ವೊಂದರಲ್ಲಿ ಕೇರಳ ಮೂಲದ ಇಸ್ರೋ ವಿಜ್ಞಾನಿ ಎಸ್.ಸುರೇಶ್ ವಾಸವಿದ್ದರು.
ತಲೆಗೆ ಗಂಭೀರ ಗಾಯವಾದಂತ ರೀತಿಯಲ್ಲಿ ಶವ ಪತ್ತೆಯಾಗಿದೆ. ಈ ಕುರಿತು ಸುರೇಶ್ ಪತ್ನಿ ಇಂದಿರಾ ದೂರು ನೀಡಿದ್ದಾರೆ.
ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.