ಗೋಕಾಕ ನಗರದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಅನ್ನೋ ಆರೋಪ ಕೇಳಿಬಂದಿದೆ.
ಗೋಕಾಕ ನಗರಸಭೆಯಲ್ಲಿ ನಾಲ್ವರು ಹಿರಿಯ ಸದಸ್ಯರು ಭಾರಿ ಪ್ರಮಾಣದ ಭ್ರಷ್ಟಾಚಾರವನ್ನು ಎಸಗಿದ್ದು, ಈ ಕುರಿತು ರಾಜ್ಯ ಸರ್ಕಾರದಿಂದ ಉನ್ನತ ಮಟ್ಟದ ತನಿಖೆಯಾಗಬೇಕು. ಹೀಗಂತ ಬಿಜೆಪಿ ಮುಖಂಡ ಅಶೋಕ ಪೂಜಾರಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಗರಸಭೆಯಲ್ಲಿ ನಡೆದ ಬ್ರಷ್ಟಾಚಾರ ಆರೋಫದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು.
ಕಳೆದ 20 ವರ್ಷಗಳಿಂದ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಕಿರಿಯ ಸಹೋದರ ಲಖನ್ ಜಾರಕಿಹೊಳಿ ಅವರ ನಿಯಂತ್ರಣದಲ್ಲಿದೆ. ಅವರ ಅನುಮತಿ ಇಲ್ಲದೆ ನಗರಸಭೆಯಲ್ಲಿ ಒಂದು ಕಡ್ಡಿಯೂ ಅಲುಗಾಡುವುದಿಲ್ಲ.
ಅಲ್ಲಿಯ ಎಲ್ಲ ನಿರ್ದೇಶನಗಳು, ಠರಾವುಗಳು ಮಂಜೂರಾತಿಗಳು ಇವರಿಬ್ಬರ ಇಚ್ಛೆಗೆ ಪೂರಕವಾಗಿ ನಡೆಯುತ್ತವೆ. ಅವರ ಅರಿವಿಗೆ ಬಾರದೇ ಯಾವುದೇ ಹಣಕಾಸಿನ ಮಂಜೂರಾತಿಯೂ ಆಗುವುದಿಲ್ಲ. ಹೀಗಿದ್ದರೂ ಭ್ರಷ್ಟಾಚಾರ ನಡೆದಿರುವುದು ಗೂಡಾರ್ಥವಾಗಿದೆ ಇದಕ್ಕೆ ಉತ್ತರಿಸಬೇಕಾದ ನಗರಸಭೆಯ ನಾಲ್ವರು ಹಿರಿಯ ಸದಸ್ಯರು ಮೌನಕ್ಕೆ ಶರಣಾಗಿರುವುದು ಜನರಿಗೆ ಅಚ್ಚರಿ ಮೂಡಿಸಿದೆ.
ಭ್ರಷ್ಟಾಚಾರದ ನಿಜವಾದ ಪಾಲುದಾರರು ಯಾರು? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಉನ್ನತ ಮಟ್ಟದ ತನಿಖೆಯಿಂದಲೇ ಉತ್ತರ ದೊರೆಯಬೇಕು. ಸರ್ಕಾರ ಕೂಡಲೇ ಉನ್ನತ ಮಟ್ಟದ ತನಿಖೆಯನ್ನು ನಡೆಸಬೇಕೆಂದು ಸರಕಾರವನ್ನು ಆಗ್ರಹಿಸಿದ್ದಾರೆ.