Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಿಜಾಬ್ ಕೋರ್ಟ್ ನ ತೀರ್ಪು ಅಸಂವಿಧಾನಿಕ

ಹಿಜಾಬ್ ಕೋರ್ಟ್ ನ ತೀರ್ಪು ಅಸಂವಿಧಾನಿಕ
bangalore , ಸೋಮವಾರ, 21 ಮಾರ್ಚ್ 2022 (20:09 IST)
ಹಿಜಾಬ್  ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ , ಇಂದು ಸುದ್ದಿಗೋಷ್ಠಿ ನಡೆಸಿದೆ. ಕೋರ್ಟ್ ನ ತೀರ್ಪು ಅಸಂವಿಧಾನಿಕ ಹೀಗಾಗಿ  ಅಸಮ್ಮತಿ ಎನ್ನುತ್ತಿದ್ದಾರೆ . ನ್ಯಾಯದ ತೀರ್ಪು ನಿರೀಕ್ಷೆ ಮಾಡಿದ್ವಿ. ಆದರೆ ತೀರ್ಪು ಖೇದಕರ ತೀರ್ಪು ಆಗಿದೆ. ಸರ್ಕಾರದ ಆದೇಶಗಳನ್ನೇ ಕೋರ್ಟ್ ಎತ್ತಿ ಹಿಡಿದಿದೆ ಹೀಗಾಗಿ ನಮ್ಮ ಆಕ್ಷೇಪ ಇದೆ ಎಂದ್ರು .ಶಿರವಸ್ತ್ರವನ್ನು ಇಸ್ಲಾಂನ ಕಡ್ಡಾಯ ಆಚರಣೆಯೇ ಅಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಇದು ರಾಜ್ಯದ ಮುಸಲ್ಮಾನ ಸಮುದಾಯಕ್ಕೆ ಬಹಳ ಆಘಾತ ತಂದಿದೆ. ನ್ಯಾಯಾಲಯವು ಅಸಂವಿಧಾನಿಕವಾಗಿ ತೀರ್ಪನ್ನು ಪ್ರಕಟಿಸಿದೆ. ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವೇ ಎಂದು ಪ್ರಶ್ನಿಸಿದೆ. ಇದು ಸಂಪೂರ್ಣವಾಗಿ ಸುಪ್ರೀಂ ಕೋರ್ಟಿನ ಆದೇಶವನ್ನು ಉಲ್ಲಂಘಿಸುವ ರೀತಿ. ಯಾಕೆಂದರೆ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶದ ವಿಚಾರವೇ ಉದಾಹರಣೆ. ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ಇನ್ನು ಬಾಕಿ ಇದೆ ಎಂದ್ರು . 

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ 2 ಗಂಟೆ ನಿದ್ದೆ ಮಾಡ್ತಾರೆ, 22 ಗಂಟೆ ದೇಶಕ್ಕಾಗಿ ಎಚ್ಚರವಾಗಿರ‍್ತಾರೆ