Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾಮಗಾರಿ ನಡೆಸಲು ಅನುಮತಿ ನೀಡದಂತೆ ಹೈಕೋರ್ಟ್ ಜಿಲ್ಲಾಧಿಕಾರಿಗೆ ಆದೇಶ

ಕಾಮಗಾರಿ ನಡೆಸಲು ಅನುಮತಿ ನೀಡದಂತೆ ಹೈಕೋರ್ಟ್ ಜಿಲ್ಲಾಧಿಕಾರಿಗೆ ಆದೇಶ
bangalore , ಶನಿವಾರ, 27 ನವೆಂಬರ್ 2021 (20:41 IST)
ಬೆಂಗಳೂರು: ಶಿವಮೊಗ್ಗದ ಸೊರಬ ತಾಲೂಕಿನ ಕುಬತೂರು ಗ್ರಾಮದ ದೇವಸ್ಥಾನದ ಕಟ್ಟಡದ ಮೇಲೆ ಕಾಮಗಾರಿ ನಡೆಸಲು ಅನುಮತಿ ನೀಡದಂತೆ ಹೈಕೋರ್ಟ್ ಯಾವುದೇ ಆದೇಶವನ್ನು ಹೊರಡಿಸಿದೆ.
ದ್ವಾಮವ್ವ ದೇವಸ್ಥಾನದ ಹಾಲಿ ಕಟ್ಟಡದ ಮೇಲೆ ಮಹಡಿ ನಿರ್ಮಾಣ ಮಾಡುವುದಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮುಜರಾಯಿ ಅಧಿಕಾರಿಯನ್ನು ನಿರ್ಬಂಧಿಸುವಂತೆ ಕೋರಿ ವಕೀಲ ಕೆ. ಶ್ರೀಧರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ರಿತುತಾಜ್ ಅವಸ್ತಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ತೀರ್ಪಿನಲ್ಲಿ, ದೇವಸ್ಥಾನದ ಛಾವಣಿಯಲ್ಲಿ ನೀರು ಸೋರುತ್ತಿರುವುದರಿಂದ ಮೊದಲನೇ ಕಟ್ಟಡ ನಿರ್ಮಾಣ ಮಾಡಲು ಜಿಲ್ಲಾಧಿಕಾರಿ ಮತ್ತು ಮುಜರಾಯಿ ಅಧಿಕಾರಿ ತೀರ್ಮಾನಿಸಿದ್ದಾರೆ. ಆದರೆ, ಮೊದಲನೆ ಮಹಡಿ ನಿರ್ಮಿಸಿದರೆ ದೇವಸ್ಥಾನದ ಸ್ವರೂಪವೇ ಹಾಳಾಗಲಿದೆ. ದೇವಸ್ಥಾನದ ಧ್ವಜಸ್ತಂಭದ ಮೇಲೆ ಯಾವುದೇ ನಿರ್ಮಾಣ ಕಾಮಗಾರಿ ನಡೆಸಲು ಅನುಮತಿಗೆ ಅವಕಾಶವಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಜೊತೆಗೆ, ಅನೇಕ ದೇವಸ್ಥಾನಗಳಿಗೆ ಯಾವುದೇ ಹಾನಿಯಾಗದಂತೆ ನೀರು ಸೋರುವುದನ್ನು ನಿಲ್ಲಿಸಲು ಅತ್ಯುತ್ತಮ ವಿಧಾನಗಳಿವೆ. ಅದೇ ಗ್ರಾಮದ ವಾಗೀಶ್ ಪಾಟೀಲ್ ಎಂಬವರು ಈ ಹಿಂದೆ ಸುಮಾರು 15 ಲಕ್ಷ ರೂ. ಖರ್ಚಿನಲ್ಲಿ ದೇವಸ್ಥಾನದ ರಿಪೇರಿ ಕೆಲಸ ಮಾಡಿದೆ. ಸೋರಿಕೆ ದುರಸ್ಥಿ ಕೆಲಸವನ್ನೂ ನೀಡುವ ಭರವಸೆ ನೀಡುವುದಾಗಿ ಅರ್ಜಿದಾರರೇ ಹೇಳಿದ್ದಾರೆ. ಆದ್ದರಿಂದ, ದೇವಸ್ಥಾನದ ಮೇಲೆ ಯಾವುದೇ ನಿರ್ಮಾಣ ಕಾಮಗಾರಿ ನಡೆಸಲು ಜಿಲ್ಲಾಧಿಕಾರಿಗಳು ಅನುಮತಿಸಬಾರದು. ಸಂಗ್ರಹಿಸಿದ ಖರ್ಚಿನಲ್ಲಿ ನೀರು ಸೋರದಂತೆ ಉತ್ಪನ್ನ ದುರಸ್ಥಿ ಮಾಡಿಕೊಡಲು ವಾಗೀಶ್ ಪಾಟೀಲ್ ಅವರ ಕೋರಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ ಪೀಠ ಅರ್ಜಿ ಇತ್ಯರ್ಥಪಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂತಾನೋತ್ಪತ್ತಿ ಆಯ್ಕೆ ಮಹಿಳೆಯ ವೈಯಕ್ತಿಕ ಸ್ವಾತಂತ್ರ್ಯದ ಭಾಗ