Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿರುದ್ಯೋಗಿಗಳಿಗೆ ಭರ್ಜರಿ ಅವಕಾಶ : ಪ್ರಾದೇಶಿಕ ಬೃಹತ್ ಉದ್ಯೋಗ ಮೇಳ

ನಿರುದ್ಯೋಗಿಗಳಿಗೆ ಭರ್ಜರಿ ಅವಕಾಶ : ಪ್ರಾದೇಶಿಕ ಬೃಹತ್ ಉದ್ಯೋಗ ಮೇಳ
ಬೆಳಗಾವಿ , ಗುರುವಾರ, 27 ಫೆಬ್ರವರಿ 2020 (15:44 IST)
ಉದ್ಯೋಗಾಕಾಂಕ್ಷಿ ಯುವಕ-ಯುವತಿಯರಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಸೂಕ್ತ ಉದ್ಯೋಗಾವಕಾಶಗಳನ್ನು ಒದಗಿಸುವ ಮಹತ್ತರ ಉದ್ದೇಶದಿಂದ ಎರಡು ದಿನಗಳ ಬೃಹತ್‌  ಪ್ರಾದೇಶಿಕ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಉದ್ಯೋಗಾಕಾಂಕ್ಷಿ ಯುವಕ-ಯುವತಿಯರಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಸೂಕ್ತ ಉದ್ಯೋಗಾವಕಾಶಗಳನ್ನು ಒದಗಿಸುವ ಮಹತ್ತರ ಉದ್ದೇಶದಿಂದ ಎರಡು ದಿನಗಳ ಬೃಹತ್‌  ಪ್ರಾದೇಶಿಕ ಉದ್ಯೋಗ ಮೇಳವನ್ನು ಬೆಳಗಾವಿ ನಗರದಲ್ಲಿ ಆಯೋಜಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಎಸ್.ಜಿ. ಬಾಳೇಕುಂದ್ರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಾಲೇಜ್ ಆವರಣದಲ್ಲಿ  ಉದ್ಯೋಗ ಮೇಳದ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಐಟಿ-ಬಿಟಿ, ಆಟೋಮೊಬೈಲ್, ಮೆಕ್ಯಾನಿಕಲ್, ಮಾರ್ಕೆಟಿಂಗ್, ಸೇಲ್ಸ್ ಆ್ಯಂಡ್ ರಿಟೇಲ್, ಟೆಲಿಕಾಂ, ಬಿಪಿಓ, ಟೆಕ್ಸಟೈಲ್, ಬ್ಯಾಂಕಿಂಗ್, ಫೈನಾನ್ಸ್, ಇನ್ಶೂರೆನ್ಸ್, ಹಾಸ್ಪಿಟಲ್, ಫಾರ್ಮಾಸಿಟಿಕಲ್, ಹೆಲ್ತ್ ಕೇರ್, ಮ್ಯಾನುಫ್ಯಾಕ್ಟರಿಂಗ್, ಟ್ರಾನ್ಸಪೋರ್ಟ್, ಹಾಸಿಟ್ಯಾಲಿಟಿ, ಹೋಂ ನರ್ಸಿಂಗ್, ಆಹಾರ ಸಂಸ್ಕರಣೆ, ಗಾರ್ಮೆಂಟ್ಸ್, ಸೆಕ್ಯೂರಿಟಿ ಸೇರಿದಂತೆ ವಿವಿಧ ಕಂಪನಿಗಳು ಉದ್ಯೋಗಮೇಳದಲ್ಲಿ ಭಾಗವಹಿಸಲಿವೆ.

ಎಸ್.ಎಸ್.ಎಲ್.ಸಿ. ಪಾಸ್-ಫೇಲ್, ಪಿ.ಯು.ಸಿ., ಐಟಿಐ, ಡಿಪ್ಲೋಮಾ , ಯಾವುದೇ ಪದವಿ, ಎಂ.ಬಿ.ಎ., ಸ್ನಾತ್ತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದ ಮತ್ತು ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಕೂಡಲೇ ಕೆಲಸಕ್ಕೆ ಸೇರ ಬಯಸುವ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ 18 ವರ್ಷ ಮೇಲ್ಪಟ್ಟು 35 ವರ್ಷದೊಳಗಿನ ವಯೋಮಾನದ ಪುರುಷರು, ಮಹಿಳೆಯರು ಹಾಗೂ ವಿಶೇಷಚೇತನರು ಭಾಗವಹಿಸಬಹುದಾಗಿದೆ.

 ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಉದ್ಯೋಗದಾತರು ಮತ್ತು ಉದ್ಯೋಕಾಂಕ್ಷಿಗಳ ನೋಂದಣಿಗೆ ಅನುಕೂಲವಾಗುವಂತೆ ವಿಶೇಷ ಜಾಲತಾಣ www.belagaviudyogamela.in ವಿನ್ಯಾಸಗೊಳಿಸಲಾಗಿರುತ್ತದೆ.



Share this Story:

Follow Webdunia kannada

ಮುಂದಿನ ಸುದ್ದಿ

ಈ ಜಿಲ್ಲೆಯಲ್ಲಿ ಕುಡಿಯುವ ಹಾಲಿಗೆ ಎಣ್ಣೆ ಮಿಕ್ಸ್ ಆಗ್ತಿದೆ