Publish Date: Mon, 26 Jun 2023 (14:17 IST)
Updated Date: Mon, 26 Jun 2023 (14:21 IST)
ಶಕ್ತಿ ಯೋಜನೆ ಜಾರಿ ಬೆನ್ನಲ್ಲೇ ಗೃಹಲಕ್ಷ್ಮೀ ಅನುಷ್ಠಾನಕ್ಕೆ ಪ್ಲಾನ್ ನಡೆಸಲಾಗಿದೆ.ನಾಳೆಯಿಂದ ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಅವಕಾಶ ಇದೆ.ಜೂನ್ 15 ರಿಂದ ಆರಂಭವಾಗಬೇಕಿದ್ದ ನೋಂದಣಿ ಪ್ರಕ್ರಿಯೆ ನಾಳೆಯಿಂದ ಶುರುವಾಗಲಿದೆ.ಗೃಹಲಕ್ಷ್ಮೀ ನೋಂದಾಣಿಗೆ ಕೊನೆ ಹಂತದ ತಯಾರಿ ಸರ್ಕಾರ ಮಾಡಿಕೊಳ್ತಿದೆ.ಗೃಹಲಕ್ಷ್ಮೀ ಯೋಜನೆ ನೋಂದಾಣಿಗೆ ಕಾಲಾಮಿತಿ ಇಲ್ಲ.ನೋಂದಣಿ ವೇಳೆ ಯಾವುದೇ ತಾಂತ್ರಿಕ ಸಮಸ್ಯೆ ಬಾರದಂತೆ ಆ್ಯಪ್ ರೆಡಿ ಸರ್ಕಾರ ಮಾಡಿದೆ.ಬೆಂಗಳೂರು ಒನ್,ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ನಾಳೆಯಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ.ಸೇವಾಸಿಂಧು ಪೋರ್ಟಲ್ ನಲ್ಲಿ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಸರ್ಕಾರ ಅವಕಾಶ ನೀಡಲಿದೆ.ಭೌತಿಕವಾಗಿ ಅರ್ಜಿ ಸಲ್ಲಿಕೆಗೆ ಸರ್ಕಾರ ಕಲ್ಪಿಸಲಿದೆ.ಗೃಹಲಕ್ಷ್ಮೀ ಯೋಜನೆಯಡಿ 2000 ರೂ ಪಡೆಯಲು ಎಪಿಎಲ್, ಬಿಪಿಎಲ್ ಅಂತ್ಯೋದಯ ಕಾರ್ಡ್ ಕಡ್ಡಾಯವಾಗಿದೆ.ಮನೆಯೊಡತಿ ಬ್ಯಾಂಕ್ ಹಾಗೂ ಆಧಾರ್ ಕಾರ್ಡ್ ನ್ನ ಜೋಡಣೆ ಮಾಡಿಸಿರಬೇಕು.ಐಟಿ ಜಿಎಸ್ಟಿ ರಿಟರ್ನ್ಸ್ ಸಲ್ಲಿಸುವರರ ಮನೆ ಪತ್ನಿಗೆ ಲಕ್ಷ್ಮಿ ಸಿಗಲ್ಲ.ಈಗಾಗಲೇ 1.42 ಕೋಟಿ ಯಜಮಾನಿಗಳನ್ನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗುರುತಿಸಿದೆ.
ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆಗೆ ಯಾವೆಲ್ಲಾ ದಾಖಲೆ ಕಡ್ಡಾಯ..? ರೇಷನ್ ಕಾರ್ಡ್ ,ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಇದ್ರೆ ಸಾಕು.ಅರ್ಜಿ ಸಲ್ಲಿಕೆ ವೇಳೆ ಸರ್ವರ್ ಡೌನ್ ಆಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
ಗೃಹಲಕ್ಷ್ಮೀಗೆ ಏನೆಲ್ಲಾ ಷರತ್ತು..?
ಒಂದು ಕುಟುಂಬದಲ್ಲಿ ಒಬ್ಬ ಯಜಮಾನಿಗೆ 2 ಸಾವಿರ ಆದಾಯ ತೆರಿಗೆ ಪಾವತಿಸಿರುವ ಕುಟುಂಬಕ್ಕೆ ಗೃಹಲಕ್ಷ್ಮೀ ಇಲ್ಲ.ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ಕಾಲಾಮಿತಿ ಇಲ್ಲ.ಜುಲೈ ನಲ್ಲಿ ಫಲಾನುಭವಿಗಳು ಆಯ್ಕೆ ಮಾಡಲಾಗುತ್ತದೆ.