Publish Date: Tue, 23 May 2023 (11:43 IST)
Updated Date: Tue, 23 May 2023 (12:45 IST)
ಬೆಂಗಳೂರು : ಚುನಾವಣೆ ಸಮಯದಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆ ಜಾರಿ ಮಾಡಲು ಸಿದ್ದರಾಮಯ್ಯ ಸರ್ಕಾರಕ್ಕೆ ಅಂಕಿಅಂಶಗಳು ಶಾಕ್ ಕೊಟ್ಟಿದೆ.
5 ಗ್ಯಾರಂಟಿಗಳ ಅನುಷ್ಠಾನಕ್ಕೆ ಫಲಾನುಭವಿಗಳ ಅಂಕಿಅಂಶಗಳೇ ಘನ ಸರ್ಕಾರದ ಬಳಿ ಇಲ್ಲ. ಅಂಕಿ ಅಂಶಗಳು ಇಲ್ಲದೇ ಇದ್ದರೂ ಮುಂದಿನ ಕ್ಯಾಬಿನೆಟ್ನಲ್ಲಿ ಜಾರಿ ಮಾಡಲಾಗುವುದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಒಂದು ವಾರದಲ್ಲಿ ಅಂಕಿಅಂಶ ಸಂಗ್ರಹ ಮಾಡುವುದು ಕಷ್ಟವಾಗಿದ್ದು, ಶೀಘ್ರವೇ ಗ್ಯಾರಂಟಿ ಘೋಷಣೆ ಜಾರಿ ಅನುಮಾನವಾಗಿದೆ.