ಡ್ರಗ್ ಅಡಿಕ್ಟ್ಗಳಿಗೆ ಅಧಿಕೃತವಾಗಿ ಹೆರಾಯಿನ್ ಮತ್ತು ಕೊಕೇನ್ ಸೇವಿಸಲು ತಾನೇ ಪ್ರತ್ಯೇಕ ಕೊಠಡಿ ನಿರ್ಮಿಸಿಕೊಡುವ ಕೆಲಸವನ್ನು ಬ್ರಿಟನ್ ಮಾಡಿದೆ! ಡ್ರಗ್ಸ್ ಸೇವನೆಗೆ ಸಂಬಂಧಿಸಿದ ಸಾವುಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ರೀತಿ ಮಾಡಿರುವ ಇಂಗ್ಲೆಂಡ್ ಸರ್ಕಾರ ಅಕ್ರಮ ಡ್ರಗ್ಸ್ಗಳ ಅಧಿಕೃತ ಬಳಕೆಯ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದಿದೆ.ಇದು ಸ್ಕಾಟಿಷ್ ಸರ್ಕಾರದಿಂದ ಬೆಂಬಲಿತವಾದ ಒಂದು ಪ್ರಾಯೋಗಿಕ ಯೋಜನೆಯಾಗಿದೆ. ಈ ರೀತಿಯ ಮೊದಲ ರೂಂ ಈ ಮೊದಲು ಗ್ಲ್ಯಾಸ್ಗೋದ ಪೂರ್ವ ತುದಿಯಲ್ಲಿ ಕಾಣಿಸಿಕೊಂಡಿದೆ. ಇನ್ನು ಡ್ರಗ್ಸ್ ಬಳಕೆದಾರರು ವೈದ್ಯಕೀಯ ತಜ್ಞರ ಮೇಲ್ವಿಚಾರಣೆಯಲ್ಲಿ ಡ್ರಗ್ಸ್ ತೆಗೆದುಕೊಳ್ಳಬಹುದಾಗಿದೆ. ಈ ಯೋಜನೆಗೆ ಗ್ಲಾಸ್ಗೋದ ಇಂಟಿಗ್ರೇಷನ್ ಜಾಯಿಂಟ್ ಬೋರ್ಡ್ ಅಧಿಕೃತ ಒಪ್ಪಿಗೆ ನೀಡಿದೆ.