Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೇಕೆದಾಟು ವಿವಾದ ದಿನದಿಂದ ದಿನಕ್ಕೆ ವ್ಯಾಪಕ ತಿರುವು

ಮೇಕೆದಾಟು ವಿವಾದ ದಿನದಿಂದ ದಿನಕ್ಕೆ ವ್ಯಾಪಕ ತಿರುವು
bangalore , ಬುಧವಾರ, 9 ಮಾರ್ಚ್ 2022 (21:02 IST)
ಮೇಕೆದಾಟು ವಿವಾದ ದಿನದಿಂದ ದಿನಕ್ಕೆ ವ್ಯಾಪಕ ತಿರುವ ಪಡೆಯುತ್ತಿದೆ. ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ಕಾಂಗ್ರೇಸ್ ನ್ನ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಕಾಲ್ನಾಡಿಗೆ ಜಾಥಾ ನಡೆಸಿದ್ರು. ಆದ್ರೆ ಈ ಮೇಕೆದಾಟು ಯೋಜನೆಯ ಪರವಾಗಿ ನಟ ಚೇತನ್ ಧ್ವನಿ ಎತ್ತಿದ್ದಾರೆ. ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಚೇತನ್  ರಾಜಕೀಯ ನಾಯಕರ ವಿರುದ್ಧ ಸಿಡಿದೆದ್ದಿದ್ರು. ಎರಡು ತಿಂಗಳ ಹಿಂದೆ  ಮೇಕೆದಾಟು ಪರ , ಅಣೆಕಟ್ಟು ವಿರುದ್ಧ ಮೇಧಾ ಪಾಟ್ಕರ್ ಮಾತನಾಡಿದ್ರು. ಕಾರ್ಮಿಕರು, ರೈತರು ಮೇಕೆದಾಟು ಪರ ನಿಂತಿರುವುದು ಒಳ್ಳೆಯದು. ಆದ್ರೆ ಡ್ಯಾಂ ಪ್ರಾಜೆಕ್ಟ್ ನಿಂದ ಸಮಸ್ಯೆ ಆಗಲಿದೆ. ನೀರು ಭಾವನಾತ್ಮಕ ವಿಚಾರವಾಗಿದ್ದು , ಮಹಿಳೆಯರು, ರೈತರು  ನೀರನ್ನು ಅವಲಂಬಿಸಿದ್ದಾರೆ. ಆದ್ರೆ ನೀರಿನ ವಿಚಾರ ಇಟ್ಕೊಂಡು ರಾಜಕಾರಣಿಗಳು ಆಟ ಆಡ್ತಿದ್ದಾರೆ. ರಾಜಕಾರಣಿಗಳು ಮೈಲೇಜ್ ತಗೊಳ್ಳುವುದಕ್ಕೆ ಕರ್ನಾಟಕ - ತಮಿಳುನಾಡಿನ ಪರ ವಿರುದ್ಧ ಮಾತನಾಡುತ್ತಾರೆ.ಇನ್ನೂ ಇದೇ ವಿಷಯವಾಗಿ ಸಿಎಂ ಆಲ್ ಪಾರ್ಟಿ ಮೀಟಿಂಗ್ ಕರೆದಿದ್ದಾರೆ. ಆ ಸಭೆಗೆ ಪರಿಸರ ತಜ್ಷರು , ಹೋರಾಟಗಾರರನ್ನ  ಕರಿಯಬೇಕು. ಇದರಲ್ಲಿ ಕಿಕ್ ಬ್ಯಾಕ್ ಪ್ಲಾನ್ ನಡೆದಿದೆ. ನೀರಿನ ಉಳಿವಿನ ಬಗ್ಗೆ , ಈ ಹೋರಾಟದ ಬಗ್ಗೆ  ನಾವು ಸಿಎಂ ಬಳ್ಳಿ ಮಾತನಾಡುತ್ತೇನೆ ಎಂದು ಚೇತನ್ ಅಸಾಮಾಧಾನ ಹೊರಹಾಕಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ, ಭಾರತದ ರಾಯಭಾರಿ ಕಚೇರಿಗೆ ಧನ್ಯವಾದ ತಿಳಿಸಿದ ಪಾಕ್ ಯುವತಿ