Webdunia - Bharat's app for daily news and videos

Install App

ಹುಡುಗಿ ಚುಡಾಯಿಸಿದಕ್ಕೆ ಗಲಾಟೆ: ಲಾಠಿ ಚಾರ್ಜ್

Webdunia
ಮಂಗಳವಾರ, 17 ಜುಲೈ 2018 (14:54 IST)
ಹುಡುಗಿಯನ್ನ ಚುಡಾಯಿಸಿದ ಹಿನ್ನಲೆಯಲ್ಲಿ ಕೋಲಾರದ ರಹಮತ್ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ ನಂತರ ತಿಳಿಯಾದ ಘಟನೆ ನಡೆದಿದೆ. ನಡುವೆ ಗುಂಪನ್ನು ಚದುರಿಸಲು ಪೊಲೀಸರು ಎರಡು ಬಾರಿ ಲಾಠಿ ಚಾರ್ಜ್ ನಡೆಸಿದ್ದಾರೆ. ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ ಘಟನೆಯು ನಡೆಯಿತು. ಇದೀಗ ರಹಮತ್ ನಗರ ಬೂದಿಮುಚ್ಚಿದ ಕೆಂಡದಂತಿದೆ.

ರಾತ್ರಿ 10 ಗಂಟೆ ಸಮಯದಲ್ಲಿ ರಹಮತ್ ನಗರದ ಸನ್ನಿ ಸ್ಟುಡಿಯೋದಲ್ಲಿ ಅನ್ಯಕೋಮಿನ ಯುವತಿಯೊಬ್ಬಳು ಫೋಟೋ ತೆಗೆದುಕೊಳ್ಳಲು ಹೋಗಿದ್ದಾಳೆ. ಆಗ ಸ್ಟುಡಿಯೋದಲ್ಲಿದ್ದ ಪುಂಡ ಯುವಕರಿಬ್ಬರು ಯುವತಿಯನ್ನ ಚುಡಾಯಿಸಿದ್ದಾರೆ. ಆಗ ಯುವತಿ ಯುವಕರು ಚುಡಾಯಿಸಿದ್ದನ್ನ ಮನೆಯವ್ರಿಗೆ ತಿಳಿಸಿದ್ದಾಳೆ. ಇದ್ರಿಂದ ರೊಚ್ಚಿಗೆದ್ದ ಯುವತಿಯ ಕಡೆಯವರು ಸ್ಟುಡಿಯೋ ಬಳಿ ಜಮಾಯಿಸಿ ಚುಡಾಯಿಸಿದ್ದ ಯುವಕರನ್ನು ಥಳಿಸಿ, ಕೂಡಿ ಹಾಕಿದ್ದಾರೆ. ಸ್ಟುಡಿಯೋಗೆ ಹಾನಿ ಮಾಡಲು ಮುಂದಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಗಲ್ ಪೇಟೆ ಪೊಲೀಸರು ಗುಂಪನ್ನು ಚದುರಿಸಲು ಪ್ರಯತ್ನಿಸಿದ್ದಾರೆ. ಗುಂಪು ಚದುರದೆ ಇದ್ದಾಗ ಲಾಠಿ ಚಾರ್ಜ್ ಮಾಡಿ ಯುವಕರನ್ನ ವಶಕ್ಕೆ ಪಡೆದಿದ್ದಾರೆ.

ಸುದ್ದಿ ತಿಳಿದು ಹೆಚ್ಚಿ ಸಂಖ್ಯೆಯಲ್ಲಿ ಜಮಾಯಿಸಿದ ಅನ್ಯಕೋಮಿನ  ಯುವಕರ ಗುಂಪು ಪೊಲೀಸರ ವಿರುದ್ಧ ಧಿಕ್ಕಾರಗಳನ್ನ ಕೂಗಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೇಳೆ ಯುವಕರ ಗುಂಪಿನಲ್ಲಿದ್ದ ಅಪರಿಚಿತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದ್ರಿಂದ ಪೊಲೀಸರು ಮತ್ತೆ ಲಾಠಿ ಚಾರ್ಜ್ ಮಾಡಿ ಗುಂಪನ್ನ ಚದುರಿಸಲು ಪ್ರಯತ್ನಿಸಿದ್ದಾರೆ. ಆಗ ಇಡೀ ರಹಮತ್ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ರಹಮತ್ ನಗರದಲ್ಲಿ ಪರಿಸ್ಥಿತಿಯನ್ನ ಹತೋಟಿಗೆ ತರಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments