Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಕಲಿ ಐಪಿಎಸ್ ಪ್ರೋಫೈಲ್ ಹಾಕಿ ಯಾಮಾರಿಸುತ್ತಿದ್ದ ವಂಚಕಿ ಅಂದರ್

ನಕಲಿ ಐಪಿಎಸ್ ಪ್ರೋಫೈಲ್ ಹಾಕಿ ಯಾಮಾರಿಸುತ್ತಿದ್ದ ವಂಚಕಿ ಅಂದರ್
ಮೈಸೂರು , ಬುಧವಾರ, 19 ಜೂನ್ 2019 (16:30 IST)
ಮ್ಯಾಟ್ರಿಮೋನಿಯಲ್ಲಿ ನಕಲಿ ಐಪಿಎಸ್ ಪ್ರೋಫೈಲ್ ಹಾಕಿ ಯಾಮಾರಿಸುತ್ತಿದ್ದ ಹೆಣ್ಣು ಕೊನೆಗೂ ಅಂದರ್ ಆಗಿದ್ದಾಳೆ.

ಮದುವೆಯಾಗೋದಾಗಿ ಹೇಳಿ ಹುಡುಗರಿಗೆ ಗಾಳ ಹಾಕಿ ಹಣ ಪೀಕ್ತಿದ್ದ  ಲೇಡಿ ಕೆಲಸ ಕೇಳಿದ್ರೆ ಎಂಥವರು ಗಾಬರಿಯಾಗಲೇಬೇಕು.
ಆರೋಪಿ ಲಾವಣ್ಯ ಬಾನು ಅಲಿಯಾಸ್ ದಿವ್ಯ ಸದ್ಯ ಜೈಲು ಪಾಲಾಗಿದ್ದಾಳೆ. ಹೆಚ್ ಡಿ ಕೋಟೆ ನಿವಾಸಿ ಲೋಕೇಶ್ ಎಂಬ ಯುವಕನ ಮದುವೆ ಆಗುವುದಾಗಿ ವಂಚನೆ ಮಾಡಿದ್ದಾಳೆ.

ಹೆಚ್ ಡಿ ಕೋಟೆ ತಾಲೂಕು ಹೆಬ್ಬನಕುಪ್ಪೆ ಗ್ರಾಮದ ಲೋಕೇಶ್ ಕಲ್ಕತ್ತದ ನೌಕ ದಳದಲ್ಲಿ ಎಂಜಿನಿಯರ್ ಕೆಲಸ ಮಾಡುತ್ತಿದ್ದಾನೆ.
ಮ್ಯಾಟ್ರಿಮೋನಿಯಲ್ಲಿ ವರನ ಹುಡುಕಿ ತರಾತುರಿಯಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾಳೆ ಲಾವಣ್ಯ. ಆರೋಪಿತೆ ಲಾವಣ್ಯ ಬಾನು ಹುಣಸೂರಿನಲ್ಲಿ ವಾಸವಾಗಿದ್ದಾಳೆ.

ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಹಣಕ್ಕೆ ಡಿಮಾಂಡ್ ಮಾಡಿದ್ದಾಳೆ ಲೇಡಿ ಲಾವಣ್ಯ.
ತಾನು ಐಪಿಎಸ್ ಪ್ರೊಭೇಷನರಿ ಮಾಡ್ತಿದ್ದೇನೆ. ಮನೆ ಕೊಳ್ಳಲು ಹಣ ಬೇಕೆಂದು ಒತ್ತಾಯ ಮಾಡಿದ್ದಾಳೆ.
ಆರೋಪಿ ಲಾವಣ್ಯ ಬಾನುಗೆ ಅಣ್ಣ ಲೋಕನಾಯಕ ಸಾಥ್ ನೀಡಿದ್ದಾನೆ.

ನನ್ನ ಚಿಕ್ಕಮ್ಮನ ಮಗಳು ಐಪಿಎಸ್ ಅಧಿಕಾರಿ ಕೊಯಮತ್ತೂರು ಎಸ್ಪಿ ರಮ್ಯ ಭಾರತಿ ಅಂತಾ ಸುಳ್ಳು ಹೇಳಿದ್ದಾಳೆ.
ರಮ್ಯ ಭಾರತಿ ಐಪಿಎಸ್ ಅವರು ಐಪಿಎಸ್ ರವಿಚನ್ನಣ್ಣನವರ ಬ್ಯಾಚ್ ಮೇಟ್ ಎಂದಿದ್ದಳಂತೆ ಲಾವಣ್ಯ.
ಮೂರು ಸಿಮ್ ಬಳಸಿ ಮೂವರ ರೋಲ್ ತಾನೇ ಮಾಡಿದ್ದಳು. 13 ಲಕ್ಷ ಹಣಕ್ಕಾಗಿ ಪದೇ ಪದೇ ಡಿಮಾಂಡ್ ಮಾಡುತ್ತಿದ್ದರಿಂದ ಅನುಮಾನ ವ್ಯಕ್ತವಾಗಿದೆ.

ಈಕೆ ನಡವಳಿಕೆ ಬಗ್ಗೆ ಅನುಮಾನಗೊಂಡ ಲೋಕೇಶ್ ವಿಚಾರಣೆ ಮಾಡಿದಾಗ ಅಸಲಿ ಸತ್ಯ ಬಯಲಾಗಿದೆ.
ಕೊನೆ ಸತ್ಯ ಬಯಲಾಗುತಿದ್ದಂತೆ  ಆತ್ಮಹತ್ಯೆ ನಾಟಕ ಮಾಡಿದ್ದಳು.

ಸಾಯೋದಾಗಿ ಹೇಳೀ ಫ್ಯಾನ್ ಗೆ ಸೀರೆ ಕಟ್ಟಿ ಲೋಕೇಶ್ ಗೆ ಬ್ಲಾಕ್ ಮೇಲ್ ಮಾಡಿದ್ದಳು. ಅಸಲೀ ಸತ್ಯ ಬಯಲಾಗುತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಾನೇ ದೂರು ನೀಡಿದ್ದಳು ಲಾವಣ್ಯ. ಮಾತುಕತೆಗೆ ಬಂದ ಲೋಕೇಶ್ ಕುಟುಂಬಸ್ಥರಿಗೆ ಹಣ ನೀಡುವಂತೆ ಡಿಮಾಂಡ್ ಮಾಡಿದ್ದಾಳೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ಲೋಕೇಶ್ ಅಣ್ಣ ವೆಂಕಟೇಶ್.

ಪ್ರಕರಣ ದಾಖಲು ಮಾಡಿಕೊಂಡು ತನಿಖೆಗಿಳಿದ ಪೊಲೀಸರಿಂದ ಬಯಲಾಯ್ತು ಲಾವಣ್ಯ ತ್ರಿಬಲ್ ಆ್ಯಕ್ಟಿಂಗ್ ಕಥೆ.
ಬಿಎ ಪದವಿ ಮಾಡಿರುವ ಲಾವಣ್ಯಬಾನು ಅಷ್ಟೋ ಇಷ್ಟೋ ಇಂಗ್ಲಿಷ್ ಕಲಿತು ಯುವಕನನ್ನು ವಂಚಿಸಿ ಈಗ ಜೈಲ್ ಸೇರಿದ್ದಾಳೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ತಕರಾರು ಮಾಡಿದರೆ ನನಗೆ ಹೇಳಿ ಎಂದ ಸಚಿವ