Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕಲಬುರಗಿ : ವಿಜಯಪುರದ ಬಳಿಕ ಇದೀಗ ಕಲಬುರಗಿಯಲ್ಲಿ ಭೂ ಕಂಪನದ ಅನುಭವವಾಗಿದೆ.
ಚಿಂಚೋಳಿ ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಭಾರೀ ಶಬ್ಧದೊಂದಿಗೆ ಲಘು ಭೂ ಕಂಪನದ ಅನುಭವವಾಗಿದೆ. ಭಯಭೀತರಾಗಿ ಜನರು ಮನೆಯಿಂದ ಹೊರಗೋಡಿ ಬಂದಿದ್ದಾರೆ. ರಾತ್ರಿ 11 ಸುಮಾರಿಗೆ ಭೂಕಂಪಿಸಿದೆ.
ಚಿಂಚೋಳಿ ತಾಲೂಕಿನ ಚಿಮ್ಮಾಇದ್ಲಾಯಿ, ದಸ್ತಾಪುರ, ಐಪಿ ಹೋಸಳ್ಳಿ ಹಾಗೂ ಸುಲೇಪೆಟ್ನಲ್ಲಿ ಕಂಪನದ ಅನುಭವವಾಗಿದೆ.
ಈ ಹಿಂದೆ ಗಡಿಕೇಶ್ವರದಲ್ಲಿ ಭೂ ಕಂಪನ ಆಗುತ್ತಿತ್ತು. ಇದೀಗ ಗಡಿಕೇಶ್ವರ ಸಮೀಪದ ಗ್ರಾಮಗಳಲ್ಲಿ ಭಾರೀ ಶಬ್ದದೊಂದಿಗೆ ಲಘು ಭೂ ಕಂಪನವಾಗಿದೆ. ಭಾರೀ ಶಬ್ದದಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ.