Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೆಟ್ರೋ ಎಸ್ಕೆಲೇಟರ್ ಮೇಲಿಂದ ಬಿದ್ದು ಒಂದೂವರೆ ವರ್ಷದ ಮಗು ಸಾವು

ಮೆಟ್ರೋ ಎಸ್ಕೆಲೇಟರ್ ಮೇಲಿಂದ ಬಿದ್ದು ಒಂದೂವರೆ ವರ್ಷದ ಮಗು ಸಾವು
ಬೆಂಗಳೂರು , ಸೋಮವಾರ, 28 ಜನವರಿ 2019 (11:51 IST)
ಬೆಂಗಳೂರು : ಮೆಟ್ರೋ ಎಸ್ಕೆಲೇಟರ್ ಮೇಲಿಂದ ಬಿದ್ದು ಮಗುವೊಂದು ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಶ್ರೀರಾಂಪುರ ಮೆಟ್ರೋ ಸ್ಟೇಷನ್​ನಲ್ಲಿ ನಡೆದಿದೆ.


ಒಂದೂವರೆ ವರ್ಷದ ಹಾಸಿನಿ ಎಸ್ಕಲೇಟರ್ ​ನಿಂದ ಬಿದ್ದ ಮೃತಪಟ್ಟ ಕಂದ. ನಿನ್ನೆ ರಾತ್ರಿ ಶ್ರೀರಾಂಪುರ ಮೆಟ್ರೋ ಸ್ಟೇಷನ್​ನಲ್ಲಿ ಹಾಸಿನಿ ತನ್ನ ಅಜ್ಜಿ ಜೊತೆ ತೆರಳುವಾಗ ಎಸ್ಕಲೇಟರ್​ನಿಂದ ಆಯತಪ್ಪಿ ಬಿದ್ದಿದ್ದಾಳೆ. ಪರಿಣಾಮ ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ.


ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಹಾಸಿನಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾಳೆ. ಆಸ್ಪತ್ರೆಯ ಬಳಿ ಪೋಷಕರ ಆಂಕ್ರಂದನ ಮುಗಿಲು ಮುಟ್ಟಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದಿನೇಶ್ ಗುಂಡೂರಾವ್ ಹಾಗೂ ಸಚಿವ ಅನಂತಕುಮಾರ್ ಹೆಗಡೆ ನಡುವೆ ಟ್ವೀಟ್ ವಾರ್