Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೇಶವೇ ಎದುರು ನೋಡುತ್ತಿರೋ ಚಂದ್ರಯಾನ-3 ಯಾರು ಕೊಡುಗೆ ಗೊತ್ತ?

ದೇಶವೇ ಎದುರು ನೋಡುತ್ತಿರೋ ಚಂದ್ರಯಾನ-3 ಯಾರು ಕೊಡುಗೆ ಗೊತ್ತ?
ಬೆಳಗಾವಿ , ಶುಕ್ರವಾರ, 14 ಜುಲೈ 2023 (12:46 IST)
ಬೆಳಗಾವಿ : ದೇಶವೇ ಎದುರು ನೋಡುತ್ತಿರೋ ಚಂದ್ರಯಾನ-3ಗೆ ಬೆಳಗಾವಿಯ ಯುವ ವಿಜ್ಞಾನಿ ಕೊಡುಗೆ ನೀಡುವ ಮೂಲಕ ಕುಂದಾನಗರಿ ಬೆಳಗಾವಿ ಜಿಲ್ಲೆಗೆ ಹಿರಿಮೆ ಹೆಚ್ಚಿಸಿದ್ದಾರೆ.
 
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಅನಗಡಿ ಗ್ರಾಮದ ಪ್ರಕಾಶ ಪಡ್ನೇಕರ್ ಚಂದ್ರಯಾನ-3 ಗಾಗಿ ಶ್ರಮಿಸುತ್ತಿದ್ದಾರೆ. ಇಡೀ ದೇಶವೇ ಹೆಮ್ಮೆ ಪಡುವ ಕಾರ್ಯಕ್ಕೆ ಬೆಳಗಾವಿ ಯುವ ವಿಜ್ಞಾನಿ ಸಾಥ್ ನೀಡಿದ್ದು, ಕಳೆದ 5 ವರ್ಷಗಳಿಂದ ಶ್ರೀಹರಿಕೋಟಾದಲ್ಲಿ ಯುವ ವಿಜ್ಞಾನಿಯ ಕಸರತ್ತು ನಡೆಸಿದ್ದಾರೆ. 

ತಾಂತ್ರಿಕ ದೋಷದಿಂದ ವಿಫಲವಾಗಿದ್ದ ಚಂದ್ರಯಾನ-2 ನಲ್ಲೂ ಪ್ರಕಾಶ ಕೆಲಸ ಮಾಡಿದ್ದರು. ಸದ್ಯ ಚಂದ್ರಯಾನ-3 ಸಕ್ಸಸ್ಗಾಗಿ ಯುವ ವಿಜ್ಞಾನಿ ಪ್ರಕಾಶ ಪಡ್ನೇಕರ್ ಶ್ರಮವಹಿಸಿದ್ದು, ಇಂದು ಮಧ್ಯಾಹ್ನ ಶ್ರೀಹರಿಕೋಟಾದಿಂದ ಚಂದ್ರಯಾನ-3 ಉಡಾವಣೆ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಮುಸ್ಲಿಮರಿಗೆ ತಮ್ಮ ಸಂವಿಧಾನದ ಬಗ್ಗೆ ಹೆಮ್ಮೆಯಿದೆ : ಅಲ್ ಇಸ್ಸಾ