ಮಹಾಮಾರಿ ಕೊರೊನಾ ವೈರಸ್ ಜಾಗತಿಕವಾಗಿ ಜನರ ಭೀತಿಗೆ ಕಾರಣವಾಗಿರುವ ನಡುವೆಯೇ ದೇಶದಲ್ಲಿ ಹಂದಿ ಜ್ವರದ ಕಾಟ ಶುರುವಾಗಿದೆ.
ಉತ್ತರ ಪ್ರದೇಶದ ಮೀರತ್ ಪ್ರದೇಶದಲ್ಲಿ ಹಂದಿ ಜ್ವರದಿಂದಾಗಿ 8 ಜನರು ಸಾವನ್ನಪ್ಪಿದ್ದು, 80 ಕ್ಕೂ ಹೆಚ್ಚು ಜನರಲ್ಲಿ ಹಂದಿ ಜ್ವರದ ಪಾಸಿಟಿವ್ ಲಕ್ಷಣಗಳು ಕಂಡು ಬಂದಿವೆ.
ಈವರೆಗೆ 400 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 80 ಕ್ಕೂ ಹೆಚ್ಚು ಮಂದಿಯಲ್ಲಿ ಹಂದಿ ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಹಂದಿ ಜ್ವರ ಶುರುವಾಗಿರುವ ಬೆನ್ನಲ್ಲೆ ಉತ್ತರ ಪ್ರದೇಶ ಸರಕಾರ ವೈದ್ಯಕೀಯ ತಂಡಗಳನ್ನು ರಚನೆ ಮಾಡಿ ಕಾರ್ಯಾಚರಣೆಗೆ ಇಳಿಸಿದೆ.