ಹೋಳಿ ಹಬ್ಬದಲ್ಲಿ ಬಣ್ಣದಾಟಕ್ಕೆ ಫೇಮಸ್ಸು ಉತ್ತರ ಕರ್ನಾಟಕ. ಆದರೆ ಮಹಾಮಾರಿ ಕೊರೊನಾ ವೈರಸ್ ಭೀತಿಯು ರಂಗಿನಾಟದ ಮೇಲೆ ಬಿದ್ದಿದೆ.
ಹೋಳಿ ಹಬ್ಬ ಎಂದರೆ ನಮಗೆಲ್ಲಾ ನೆನಪಾಗೋದೇ ಉತ್ತರ ಕರ್ನಾಟಕದ ಬಾಗಲಕೋಟೆ. ಇಷ್ಟು ವರ್ಷಗಳಿಂದ ನಿರಂತರವಾಗಿ ಮೂರು ದಿನ ಬಣ್ಣದ ಸಡಗರ ನಗರದಲ್ಲಿ ಮನೆ ಮಾಡಿರುತ್ತಿತ್ತು. ಈ ಸಲ ನಾಲ್ಕು ದಿನಗಳವರೆಗೆ ಬಣ್ಣದ ಆಟ ನಡೆಯಲಿದೆ. ನವನಗರ ಹಾಗೂ ವಿದ್ಯಾಗಿರಿಯಲ್ಲಿ ನಾಲ್ಕನೇ ದಿನ ಬಣ್ಣದ ರಂಗು ಏರಲಿದೆ.
ಆದರೆ ಮಹಾಮಾರಿ ಕೊರೊನಾ ವೈರಸ್ ಭೀತಿ ಜನರಲ್ಲಿ ಮನೆಮಾಡಲಾರಂಭಿಸಿದೆ.
ಮಹಾ ರೋಗದಿಂದಾಗಿ ಬಹುತೇಕ ಜನರು ಬಣ್ಣದಾಟದಲ್ಲಿ ಪಾಲ್ಗೊಳ್ಳುವುದು ಡೌಟ್ ಎನ್ನಗುತ್ತಿದೆ. ಕೊರೊನಾ ಸಾಂಕ್ರಾಮಿಕ ವೈರಸ್ ಆಗಿರುವುದರಿಂದಾಗಿ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಅದ್ಧೂರಿ ರಂಗಿನಾಟ ಈ ವರ್ಷ ಹೇಗೆ ನಡೆಯಲಿದೆ ಅನ್ನೋ ಕುತೂಹಲ ರಾಜ್ಯದ ಜನರಲ್ಲಿದೆ.