Webdunia - Bharat's app for daily news and videos

Install App

ವಿಮಾನ ಹಾರಿಸಿದ ಸಿಎಂ, ದೇವರನ್ನೇ ಮಾಯ ಮಾಡಿದ ಅಧಿಕಾರಿಗಳು

Webdunia
ಶನಿವಾರ, 23 ನವೆಂಬರ್ 2019 (22:26 IST)
ವಿಮಾನ ನಿಲ್ದಾಣವನ್ನು ಸಿಎಂ ಲೋಕಾರ್ಪಣೆಗೊಳಿಸಿದ್ರೆ, ಅಲ್ಲಿನ ದೇವರನ್ನು ಅಧಿಕಾರಿಗಳು ಮಾಯ ಮಾಡಿರೋ ಆರೋಪ ಕೇಳಿಬಂದಿದೆ.

ಕಲಬುರಗಿ ವಿಮಾನ ನಿಲ್ದಾಣದಿಂದ ವಾಣಿಜ್ಯ ಕಾರ್ಯಾಚರಣೆ ಕೈಗೊಳ್ಳುವ ಪೂರ್ವ ಡಿಜಿಸಿಎ‌ ನಿರ್ದೇಶನದಂತೆ ಸುರಕ್ಷತಾ ದೃಷ್ಠಿಯಿಂದ ರನ್ ವೇಗೆ ತುಂಬಾ ಹತ್ತಿರದಲ್ಲಿದ್ದ ಧಾರ್ಮಿಕ‌ ದೇವಸ್ಥಾನವನ್ನು ಸುರಕ್ಷತಾ ದೃಷ್ಟಿಯಿಂದ  ತೆರವುಗೊಳಿಸಿ ಧಾರ್ಮಿಕ ವಿಧಿ-ವಿಧಾನದಂತೆ ವಿಗ್ರಹವನ್ನು ಜಲಕ್ಕೆ ಸಮರ್ಪಿಸಲಾಗಿದೆ ಎಂದು ವಿಮಾನ ನಿಲ್ದಾಣಗಳ ಪ್ರಾಧಿಕಾರ ( ಎಎಐ) ಸ್ಪಷ್ಟಪಡಿಸಿದೆ.

ಕಲಬುರಗಿ ವಿಮಾನ‌ ನಿಲ್ದಾಣವನ್ನು  ಸಂಪೂರ್ಣವಾಗಿ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸಿದ ನಂತರ ವಾಣಿಜ್ಯ ಕಾರ್ಯಾಚರಣೆ ಮತ್ತು ನಿರ್ವಹಣೆಗೆ
742 ಎಕರೆ ಸ್ಥಿರಾಸ್ತಿಯೊಂದಿಗೆ ಸಂಪೂರ್ಣ ಪ್ರದೇಶದ ಮಾಲೀಕತ್ವವನ್ನು  ಅಧಿಕೃತವಾಗಿ ತಮಗೆ ಈಗಾಗಲೇ ಹಸ್ತಾಂತರಿಸಲಾಗಿದ್ದು, ಸದರಿ ಪ್ರದೇಶದ ಮಾಲೀಕತ್ವವು ಈಗ ನಮ್ಮದ್ದಾಗಿರುತ್ತದೆ ಎಂದು ಎಎಐ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ಪ್ರದೇಶ ತಮ್ಮ ವಶಕ್ಕೆ ಪಡೆದ ನಂತರ ವಾಣಿಜ್ಯ ವಿಮಾನ‌ ಸಂಚಾರಕ್ಕೆ ಡಿಜಿಸಿಎ ಅವರಿಗೆ ಅನುಮತಿ ಕೋರಿದ ಮೇಲೆ ವಿಮಾನ ನಿಲ್ದಾಣ ಪರಿಶೀಲನೆಗೆ ಬಂದ ಡಿಜಿಸಿಎ ತಂಡ ರನ್ ವೇ ಬಳಿ ಇರುವ ಧಾರ್ಮಿಕ ದೇವಸ್ಥಾನವನ್ನು ಸುರಕ್ಷತಾ ದೃಷ್ಢಿಯಿಂದ ತೆರವುಗೊಳಿಸಲು ತಿಳಿಸಿದ್ದರಿಂದ ತೆರವಿಗೆ ಕ್ರಮಕೈಗೊಳ್ಳಲಾಯಿತು ಎಂದು ಹೇಳಿದರು.

ಕಲಬುರಗಿ ವಿಮಾನ ನಿಲ್ದಾಣ ಸ್ಥಾಪನೆಗಾಗಿ ಈ ಹಿಂದೆ ಭೂಸ್ವಾಧೀನ ಪ್ರಕ್ರಿಯೆ ಕೈಗೊಂಡ ಸಂದರ್ಭದಲ್ಲಿ ಭೂಮಿ ಕಳೆದುಕೊಂಡ ಗ್ರಾಮಸ್ಥರಿಗೆ ಸರ್ಕಾರದಿಂದ ನೂತನ ಗ್ರಾಮದಲ್ಲಿ ಪುನರ್ ವಸತಿ ಕಲ್ಪಿಸಿ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳು ಹಾಗೂ ಧಾರ್ಮಿಕ ಕಾರ್ಯಗಳಿಗಾಗಿ ಪ್ರತ್ಯೇಕ ದೇವಸ್ಥಾನವನ್ನು ಸಹ ನಿರ್ಮಿಸಲಾಗಿರುತ್ತದೆ. ಆ ಸಂದರ್ಭದಲ್ಲಿ ಉದ್ದೇಶಿತ‌ ವಿಮಾನ‌ ನಿಲ್ದಾಣ ಪ್ರದೇಶದಲ್ಲಿದ್ದ ಹಳೇ ದೇವಸ್ಥಾನದಲ್ಲಿನ ವಿಗ್ರಹವನ್ನು ಪುನರ್ ವಸತಿ ಕಲ್ಪಿಸಿರುವ ನೂತನ ದೇವಾಸ್ಥಾನಕ್ಕೆ ಸ್ಥಳಾಂತರಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಾಗ, ಗ್ರಾಮಸ್ಥರು
ಹೊಸದಾಗಿ ನಿರ್ಮಾಣವಾಗಿದ್ದ ದೇವಸ್ಥಾನದಲ್ಲಿ ಹಳೆಯ ವಿಗ್ರಹವನ್ನು ಸ್ಥಾಪಿಸಲು ಬರುವುದಿಲ್ಲ. ಆದ್ದರಿಂದ ನೀವು ಇದ್ದ ವಿಗ್ರಹವನ್ನು ತೆಗೆದು ವಿಧಿವತ್ತಾಗಿ ವಿಸರ್ಜನೆ ಮಾಡಲು ನಮ್ಮ ಅಭ್ಯಂತರವಿಲ್ಲ ಎಂಬುದಾಗಿ ತಿಳಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ವಾಣಿಜ್ಯ ಸಂಚಾರ ಅರಂಭದ ಮುನ್ನ ಡಿಜಿಸಿಎ ನಿರ್ದೇಶನದಂತೆ ದೇವಸ್ಥಾನ ತೆರವುಗೊಳಿಸಲಾಗಿದೆ ಎಂದು ಸ್ಪಷ್ಟ ನೆ ನೀಡಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments