ಬೆಂಗಳೂರು-ವಿಶಿಷ್ಟ ರೀತಿಯ ಟ್ರಾಫಿಕ್ ಕಂಟ್ರೋಲ್ ಗೆ ಸಂಚಾರಿ ಪೊಲೀಸರು ಮುಂದಾಗಿದ್ದಾರೆ.ಡ್ರೋನ್ ಹಾರಿಸುವ ಮೂಲಕ ಟ್ರಾಫಿಕ್ ಮ್ಯಾನೇಜ್ ಮೆಂಟ್ ಕಂಟ್ರೋಲ್ ಗೆ ಸಂಚಾರಿ ಪೊಲೀಸರು ಮುಂದಾಗಿದ್ದಾರೆ.ಎಲ್ಲೆಲ್ಲಿ ಟ್ರಾಫಿಕ್ ಇದೆ, ಎಲ್ಲೆಲ್ಲಿ ವಾಹನ ಸವಾರರಿಗೆ ಸಮಸ್ಯೆ ಆಗುತ್ತಿದೆಯಾವುದಾದ್ರು ವಾಹನ ಕೆಟ್ಟು ನಿಂತಿದ್ಯಾ, ಇದ್ರಿಂದ ಟ್ರಾಫಿಕ್ ಜಾಮ್ ಆಗುತ್ತಿದ್ಯಾ ಎಂದು ವಾಚ್ ಮಾಡಲಾಗುತ್ತೆ.
ಟ್ರಾಫಿಕ್ ಸಮಸ್ಯೆ ಕಂಡು ಬಂದಲ್ಲಿ, ವಾಹನಸವಾರರಿಗೆ ಕಿರಿಕಿರಿ ಉಂಟಾದಲ್ಲಿ ತಕ್ಷಣ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.ಡ್ರೋನ್ ವಿಡಿಯೋವನ್ನು ಪೊಲೀಸರು ವಾಚ್ ಮಾಡಲಿದ್ದಾರೆ.ಅಲ್ಲೆನಾದ್ರು ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಸಂಭಂದ ಪಟ್ಟ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗೆ ಮಾಹಿತಿ ನೀಡಲಿದ್ದಾರೆ.ನಂತರ ತಕ್ಷಣ ಸ್ಥಳಕ್ಕೆ ತೆರಳಿ ವಾಹನ ಸವಾರರ ಸಮಸ್ಯೆಯನ್ನ ಸಂಚಾರಿ ಪೊಲೀಸರು ಬಗೆಹಾತಿಸಲಿದ್ದಾರೆ.