Publish Date: Wed, 27 Oct 2021 (11:10 IST)
Updated Date: Wed, 27 Oct 2021 (11:15 IST)
ಮೈಸೂರು : ಕ್ಷುಲ್ಲಕ ಕಾರಣಕ್ಕೆ ತನ್ನ ಸ್ನೇಹಿತನ ಕತ್ತು ಕೊಯ್ದ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಸೂರಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆ ನಡೆದು ಒಂದು ವಾರ ಕಳೆದರೂ ಆರೋಪಿಯನ್ನ ಪತ್ತೆಹಚ್ಚುವಲ್ಲಿ ಪೋಲೀಸರು ವಿಫಲರಾಗಿದ್ದಾರೆ. ದುಡ್ಡಿನ ವಿಚಾರಕ್ಕೆ ಮಹಾದೇವಸ್ವಾಮಿ ಮತ್ತು ರೇವಣ್ಣ ಎಂಬಾತನ ಮಧ್ಯೆ ಗಲಾಟೆ ನಡೆದಿತ್ತು, ಈ ಸಂಬಂಧ ಇಬ್ಬರ ಮಧ್ಯೆ ದ್ವೇಷವನ್ನೂ ಹುಟ್ಟಿಹಾಕಿತ್ತು, ಹೀಗಾಗಿ ಇದೇ ವಿಚಾರವಾಗಿ ಬ್ಲೇಡ್ನಿಂದ ರೇವಣ್ಣನ ಕತ್ತು ಕೊಯ್ದು ಮಹದೇವಸ್ವಾಮಿ ಕೊಲೆಗೈದು ಪರಾರಿಯಾಗಿದ್ದಾನೆ. ಸದ್ಯ ಹಲ್ಲೆಗೊಳಗಾಗಿರುವ ರೇವಣ್ಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದರೆ ಪೊಲೀಸರು ಮಾತ್ರ ಆರೋಪಿಯನ್ನ ಪತ್ತೆ ಹಚ್ಚಿಯೇ ಇಲ್ಲದಿರುವುದು ದುರಂತವಾಗಿದೆ..