ಬೆಂಗಳೂರು : ಸಿದ್ದರಾಮಪ್ಪ ಎಂಬ ಐದು ವರ್ಷದ ಬಾಲಕ ಜ.24 ರಂದು ಸಂಜೆ ಹಠಾತ್ತನೆ ಕಣ್ಮರೆಯಾಗಿದ್ದ. ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಭೀಮಪ್ಪ -ತಾರಮ್ಮ ದಂಪತಿಗಳು ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದರೂ ಇದುವರೆಗೂ ಪತ್ತೆಯಾಗಿಲ್ಲ. ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಗನಿಗಾಗಿ ಹಂಬಲಿಸುತ್ತಿರುವ ದಂಪತಿಗಳು ನಿತ್ಯ ಕಣ್ಣೀರು ಹಾಕುತ್ತಿದ್ದಾರೆ.
ಈ ಕುರಿತು ದೂರು ದಾಖಲಾಗಿ 15 ದಿನಗಳೇ ಕಳೆದಿದ್ದರೂ ಇದುವರೆಗೂ ಬಾಲಕನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಬಾಲಕನ ಪತ್ತೆ ಅಥವಾ ಸುಳಿವು ಸಿಕ್ಕಿದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.