ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಣ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸಲು ಗಮನ ನೀಡಿಲ್ಲ. ಶಿಕ್ಷಣ ಇಲಾಖೆ ಪಾರ್ಶ್ವವಾಯು ಪೀಡಿತವಾಗಿದ್ದು, ತಮ್ಮ ಬಳಿ ಇರುವ ಶಿಕ್ಷಣ ಇಲಾಖೆ ಖಾತೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೇರೊಬ್ಬ ಸಚಿವರಿಗೆ ವಹಿಸಿಕೊಡಬೇಕು ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಆಗ್ರಹಿಸಿದ್ದಾರೆ.
ಶಿಕ್ಷಣ ಇಲಾಖೆ ಅನಾಥವಾದಂತಿದೆ. ಅದಕ್ಕೆ ಸಚಿವರೊಬ್ಬರನ್ನು ನೇಮಕ ಮಾಡಬೇಕು ಎಂದು ವಿಧಾನಪರಿಷತ್ನ ಬಿಜೆಪಿ ಶಾಸಕ ಅರುಣ್ ಶಹಾಪೂರ ಆಗ್ರಹಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿಯಲ್ಲಿ ಶಿಕ್ಷಣ ಖಾತೆ ಇದ್ದು, ಅವರೊಂದಿಗೆ ಚರ್ಚೆ ನಡೆಸಲು ಸಾಧ್ಯವಿಲ್ಲ. ಜೆಡಿಎಸ್ ಶಾಸಕರು ಮಾತ್ರ ಅವರನ್ನು ಭೇಟಿ ಮಾಡಲು ಸಾಧ್ಯ. ಹಾಗಾಗಿ ಶಿಕ್ಷಣ ಇಲಾಖೆಗೆ ಸಚಿವರೊಬ್ಬರ ನೇಮಕ ಆಗಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ನಿರ್ದೇಶಕರು ವರ್ಗಾವಣೆಗೊಂಡು ನಾಲ್ಕು ತಿಂಗಳುಗಲೇ ಕಳೆದಿದೆ. ಪೂರ್ಣಾವಧಿ ನಿರ್ದೇಶಕರಿಲ್ಲದೆ ಇಲಾಖೆಯಲ್ಲಿ ಶಿಕ್ಷಕರ ವರ್ಗಾವಣೆ ಗೊಂದಲದ ಗೂಡಾಗಿದೆ ಎಂದು ಅವರು ಆರೋಪಿಸಿದರು.