Publish Date: Fri, 02 Feb 2018 (14:09 IST)
Updated Date: Fri, 02 Feb 2018 (14:16 IST)
ಕೊಲೆಯಾದವರಲ್ಲ ನಮ್ಮ ಪಕ್ಷದವರು ಎಂದು ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಲೆಯಾದವರಲ್ಲ ನಮ್ಮ ಪಕ್ಷದವರು ಎಂದು ಹೇಳಿಕೊಂಡು ರಾಜಕಾರಣ ಮಾಡುತ್ತಿರುವ ಬಿಜೆಪಿಯವರು, ಈಚೆಗೆ ಕೊಲೆಯಾಗಿರುವ ಸಂತೋಷನನ್ನು ಪಕ್ಷದ ಕಾರ್ಯಕರ್ತ ಎಂದು ಹೇಳಿತ್ತಿದ್ದಾರೆ. ಆದರೆ, ಸಂತೋಷ ಬಿಜೆಪಿ ಕಾರ್ಯಕರ್ತನಲ್ಲ ಎಂದು ತಿಳಿಸಿದ್ದಾರೆ.
ಈಚೆಗೆ ಸತ್ತವರು ಹಾಗೂ ಕೊಲೆಯಾದವರೆಲ್ಲ ಬಿಜೆಪಿಯವರ ನಮ್ಮವರು ಎನ್ನುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂತೋಷ್ ಕೊಲೆ ಪ್ರಕರಣವನ್ನು ಈಗಾಗಲೇ ಸಿಸಿಬಿಗೆ ವಹಿಸಲಾಗಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳುತ್ತೇವೆ, ಯಾರ ಜೀವಕ್ಕೂ ಅಪಾಯವಾಗಬಾರದು. ಕೊಲೆ ಖಂಡನೀಯ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.