ಚಾಮರಾಜನಗರ ಜಿಲ್ಲೆಯ ಪುರಾಣ ಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟ ಹಾಗೂ ಹಿಮವದ್ ಗೋಪಾಲಸ್ವಾಮಿ ಸ್ವಾಮಿ ಬೆಟ್ಟ ಮುಂಜಾನೆಯೇ ಮಂಜಿನಿಂದ ಆವರಿಸಿಕೊಂಡಿದೆ. ಮೊದಲೇ ಹಸಿರು ಹೊದಿಕೆಯಂತಿರುವ ಬಿಳಿಗಿರಿರಂಗನ ಬೆಟ್ಟ ಹಾಗು ಹೆಸರಲ್ಲೇ ಹಿಮವಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ರಮಣೀಯ ದೃಶ್ಯ ನೋಡುಗರ ಮನಸೂರೆಗೊಳಿಸಿದೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದಟ್ಟವಾದ ಮಂಜು ಆವರಿಸಿದ್ದು, ಮಂಜಿನಿಂದ ಪ್ರಕೃತಿಯ ಸೌಂದರ್ಯ ದುಪ್ಪಟ್ಟಾಗಿದೆ. ಈ ಹಿಮದ ವಾತಾವರಣದಿಂದಾಗಿ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳಾದ ಪ್ರಕೃತಿ ತಾಣಗಳಲ್ಲಿ ಮತ್ತಷ್ಟು ಸೊಬಗು ಹೆಚ್ಚಾಗಿ ಪ್ರಕೃತಿ ಸೌಂದರ್ಯ ಸವಿಯಲು ಎರಡು ಕಣ್ಣು ಸಾಲದು ಎಂಬಂತಿದೆ.