Publish Date: Mon, 28 Nov 2022 (16:37 IST)
Updated Date: Mon, 28 Nov 2022 (16:40 IST)
ಇಂದಿನಿಂದ ಕಾಂಗ್ರೆಸ್ನಲ್ಲಿ ಮತ್ತೊಂದು ಪಾದಯಾತ್ರೆ ಆರಂಭವಾಗಿದೆ. ಕೆಪಿಸಿಸಿಯ ಒಟ್ಟು 9 ಮುಂಚೂಣಿ ಘಟಕಗಳಿಂದ ಸಂವಿಧಾನ್ ಬಚಾವ್ ಪಾದಯಾತ್ರೆ ನಡೆಯುತ್ತಿದೆ. ಇಂದಿನಿಂದ ಡಿಸೆಂಬರ್ 2 ರವರೆಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಚಿತ್ರದುರ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾದಯಾತ್ರೆಗೆ ಚಾಲನೆ ನೀಡಿದ್ರು. ಚಿತ್ರದುರ್ಗ, ದಾವಣಗೆರೆ, ಹಾವೇರಿ, ಗದಗ, ಹುಬ್ಬಳ್ಳ ಧಾರವಾಡ, ಬೆಳಗಾವಿಯಲ್ಲಿ ಯಾತ್ರೆ ಸಾಗಲಿದೆ. ಕೊನೆಯ ದಿನ ಹುಬ್ಬಳ್ಳಿಯಲ್ಲಿ ಯಾತ್ರೆ ಸಮಾಪ್ತಿ ಮಾಡಲಾಗುತ್ತದೆ. ಅಂದೇ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.