ಬೆಂಗಳೂರು-ಕಲಬರುಗಿ ಅಂಬೇಡ್ಕರ್ ಪ್ರತಿಮೆಗಾಗಿ ಗಲಾಟೆ ವಿಚಾರವಾಗಿ ನಗರದಲ್ಲಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಇದಾಗಲೇ ನಾಲ್ಕು ಜನರನ್ನ ಬಂಧಿಸಿದ್ದಾರೆ.ಇದ್ರ ಮೋಟಿವ್ ಏನು ಅಂತಾ ತನಿಖೆಗೆ ಹೇಳಿದ್ದೇನೆ.ಯಾಕೆಂದ್ರೆ ಈ ಘಟನೆ ಆಗಬೇಕಾದ್ರೆ ಮೋಟಿವೇಶನ್ ಇರುತ್ತೆ.ಅದಕ್ಕೆ ಯಾರು ಹೇಳಿದ್ರು ಅಂತಾ ವಿಚಾರಿಸಿ ಮುಂದಕ್ಕೆ ಸೂಕ್ತ ತನಿಖೆ ನಡೆಸುತ್ತೇವೆ.ಇವತ್ತು ಕೋರ್ಟ್‌ಗೆ ಪ್ರಸ್ತುತ್ತ ಪಡಿಸುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಸೂಕ್ತ ಕ್ರಮಕ್ಕೆ ಬಿಜೆಪಿ ಆಗ್ರಹ ವಿಚಾರವಾಗಿ ಬಿಜೆಪಿ ಅವರಿಗೆ ಯಾರು ಮಾಡಿದ್ದಾರೆ ಅಂತಾ ಗೊತ್ತಾಗುತ್ತೆ.ಅವರಿಗೆ ಮುಂದೆ ಗೊತ್ತಾಗುತ್ತೆ.ಮಾಹಿತಿ ಕೆಲವೊಂದು ಹೇಳೊಕ್ಕೆ ಆಗಲ್ಲ.ಯಾರೂ ಹೇಳಿಕೊಟ್ಟಿದ್ದಾರೆ ಇದರ ಹಿಂದೆ ಯಾರಿದ್ದಾರೆ .ಎಲ್ಲವೂ ಕೂಡ ಪರಿಶೀಲನೆ ನಡೆಸಬೇಕಾಗುತ್ತೆ.ಇನ್ನೂ ನಿಗಮ ಮಂಡಳಿ ಎಲ್ಲರ ಅಭಿಪ್ರಾಯ ಪಡೆದಿದ್ದಾರೆ ಎಂಬ ವಿಚಾರವಾಗಿ ಪರಮೇಶ್ವರ್ ಆಯ್ತು ಅಲ್ವಾ, ನೋಡಿ ಸಿಎಂ, ಅಧ್ಯಕ್ಷರು ಹೇಳಿದ ಮೇಲೆ ಮುಗಿತ್ತು.ನಾನು ಹೇಳಿದ್ದು ಆಯ್ತು, ಆದ್ರೆ ಕ್ಲಾರಿಫಿಕೇಶನ್ ಕೊಟ್ಟಿದ್ದಾರೆ ಅಲ್ವಾ ಎಂದು ಪರಮೇಶ್ವರ್ ಹೇಳಿದ್ದಾರೆ.