ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಟಾರ್ಗೆಟ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಗೋವಿಂದರಾಜ ನಗರ ಠಾಣಾ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.ನಿಹಾಲ್ ರಾಜ್, ಅನಂತ್ ಪಿ @ ತಮಿಳ್ ಬಂಧಿತ ಆರೋಪಿಗಳಾಗಿದ್ದು,ಹ್ಯಾಂಡಲ್ ಲಾಕ್ ಮುರಿದು ಬೈಕ್ ಗಳನ್ನು ಖದೀಮರು ಎಗ್ಗರಿಸುತ್ತದರು.ಆರೋಪಿಗಳ ಬಂಧನದಿಂದ 8 ಬೈಕ್ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ.ಗೋವಿಂದರಾಜ ನಗರದಲ್ಲಿ 2, ಮಾಗಡಿ ರಸ್ತೆ, ಸುಬ್ರಹ್ಮಣ್ಯ ನಗರ , ಬ್ಯಾಟರಾಯಪುರದಲ್ಲಿ ತಲಾ 1 ಪ್ರಕರಣ ಬೆಳಕಿಗೆ ಬಂದಿದೆ.ಬಂಧಿತರಿಂದ 3 ಲಕ್ಷ ಮೌಲ್ಯದ 8 ದ್ವಿಚಕ್ರ ವಾಹನಗಳು ವಶಕ್ಕೆ ಪಡೆಯಲಾಗಿದೆ.ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಪೊಲೀಸರು ಬಲೆ ಬಿಸಿದಾರೆ.