ರಾಜ್ಯದಲ್ಲಿ ಈಗಾಗಲೇ ಹಂತ ಹಂತವಾಗಿ ಶಾಲೆ ಆರಂಭ ಏನೋ ಆಗಿದೆ. ಆದ್ರೆ 1 ರಿಂದ 5 ನೇ ತರಗತಿವರೆಗೂ ಶಾಲೆ ಆರಂಭ ಆಗಿಲ್ಲ. ಹೀಗಾಗಿ ಶಾಲೆ ಆರಂಭಿಸುವಂತೆ ಸರ್ಕಾರಕ್ಕೆ ಖಾಸಗಿ ಶಾಲೆಗಳು ಒತ್ತಡ ಹೇರುತ್ತಿದ್ರೆ ಸರ್ಕಾರ ಮಾತ್ರ ಮೀನಾಮೇಷ ಏಣಿಸುತ್ತಿದೆ. ಖಾಸಗಿ ಶಾಲೆಗಳು ಶಾಲೆ ಆರಂಭಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿ ಮಾಡಿ ಸಾಕಗುದ್ದಾರೆ ಕೊನೆಗೆ ಇವರ ಮನವಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆಯ ಆಯುಕ್ತ ವಿಕಾಸ್ ಇಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಯನ್ನ ಸಭೆಗೆ ಕರೆದು ಕೆಲಕಾಲ ಚರ್ಚೆ ನಡೆಸಿದ್ದಾರೆ. ಇನ್ನೂ ಶಾಲೆ ಆರಂಭಕ್ಕೆ ಸ್ಪಂದಿಸಿದ ಆಯುಕ್ತರು ಅಕ್ಟೋಬರ್ ನಲ್ಲಿ ಶಾಲೆ ಆರಂಭ ಮಾಡುವ ಮುನ್ಸೂಚನೆ ನೀಡಿದ್ದಾರೆ. ಈ ಕುರಿತಂತೆ ನಾಳೆ ಶಿಕ್ಷಣ ಸಚಿವರದಂತಹ ಬಿಸಿ ನಾಗೇಶ್ ಯೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಆಯುಕ್ತ ವಿಕಾಶ್ ಹೇಳಿದ್ದಾರೆ