ಹೆತ್ತ ಮಗನ ಎದುರಲ್ಲೇ ತಂದೆಯೊಬ್ಬನು ಗುಂಡಿನ ದಾಳಿಗೆ ಒಳಗಾಗಿ ಹತ್ಯೆಗೊಳಗಾಗಿರೋ ಘಟನೆ ನಡೆದಿದೆ.
ಐದು ವರ್ಷದ ಪುಟ್ಟ ಮಗನ ಮುಂದೆಯೇ ತಂದೆಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಅಪರಿಚಿತರು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಪುಟ್ಟ ಮಗುವಿಗೂ ಗಾಯಗಳಾಗಿವೆ.
ನವದೆಹಲಿಯ ಓಖ್ಲಾ ನಗರದ ನಿವಾಸಿ ಮೊಹಮ್ಮದ್ ಹತ್ಯೆಗೀಡಾದವನು ಎಂದು ಗುರುತಿಸಲಾಗಿದೆ.
ಈತನು ತರಕಾರಿ ವ್ಯಾಪಾರಿಯಾಗಿದ್ದನು. ವಯಕ್ತಿಕ ದ್ವೇಷಕ್ಕೆ ಈ ಹತ್ಯೆ ನಡೆದಿದೆ ನಡೆದಿರಬಹುದು ಅಂತ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.