Select Your Language

Notifications

webdunia
webdunia
webdunia
webdunia

Taxi Cab price hike: ಇಂದಿನಿಂದ ಟ್ಯಾಕ್ಸಿ ಕ್ಯಾಬ್ ಗಳ ಬೆಲೆಯೂ ಹೆಚ್ಚಳ: ಎಷ್ಟು ಹೆಚ್ಚಾಗಿದೆ ನೋಡಿ

Taxi

Krishnaveni K

ಬೆಂಗಳೂರು , ಶುಕ್ರವಾರ, 4 ಏಪ್ರಿಲ್ 2025 (10:02 IST)
ಬೆಂಗಳೂರು: ಎಲ್ಲಾ ಬೆಲೆ ಏರಿಕೆಗಳ ಮಧ್ಯೆ ಈಗ ಟ್ಯಾಕ್ಸಿ ಕ್ಯಾಬ್ ಗಳ ಬೆಲೆಯೂ ಹೆಚ್ಚಳವಾಗಿದೆ. ಇಂದಿನಿಂದಲೇ ಬೆಲೆ ಏರಿಕೆ ಜಾರಿಗೆ ಬರಲಿದ್ದು, ಎಷ್ಟು ಹೆಚ್ಚಾಗಿದೆ ಇಲ್ಲಿ ನೋಡಿ.

ಇತ್ತೀಚೆಗೆ ಉಕ್ಕು, ಅಟೋ ಮೊಬೈಲ್ ದರ ಹೆಚ್ಚಳವಾಗಿರುವುದರಿಂದ ಕಾರು ತಯಾರಿಕಾ ಕಂಪನಿಗಳ ದರ ಹೆಚ್ಚಳ ಮಾಡಲಾಗಿದೆ. ಮೊನ್ನೆಯಷ್ಟೇ ರಾಜ್ಯ ಸರ್ಕಾರವೂ ಡೀಸೆಲ್ ಮೇಲಿನ ದರವೂ ಹೆಚ್ಚಳವಾಗಿದೆ. ಇದರಿಂದಾಗಿ ಟೂರ್ ಆಂಡ್ ಟ್ರಾವೆಲ್ಸ್ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ.

ಹೀಗಾಗಿ ಈಗ ಕ್ಯಾಬ್ ಕಾರ್ ಗಳ ದರವನ್ನೂ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಇಂದಿನಿಂದ ಕ್ಯಾಬ್ ಗಳ ದರ ಪ್ರತೀ ಕಿ.ಮೀ. ಗೆ 2 ರಿಂದ 5 ರೂ.ಗೆ ಏರಿಕೆಯಾಗಲಿದೆ. ದರ ಹೆಚ್ಚಳ ಮಾಡದೇ ಇದ್ದರೆ ಉದ್ಯಮ ನಡೆಸುವುದು ಕಷ್ಟ ಎಂಬ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಿದೆ ಎಂದು ಕ್ಯಾಬ್ ಮಾಲಿಕರ ಸಂಘ ಹೇಳಿದೆ.

ಇನ್ನೇನು ಬೇಸಿಗೆ ರಜೆ ಬಂದಿದ್ದು, ಹಲವರು ಕ್ಯಾಬ್ ಕಾರ್ ಬುಕ್ ಮಾಡಿಕೊಂಡು ಪ್ರವಾಸೀ ತಾಣಗಳಿಗೆ ತೆರಳುವ ಯೋಜನೆ ಹಾಕಿಕೊಂಡಿರುತ್ತಾರೆ. ಈ ಸಮಯದಲ್ಲಿ ಬೆಲೆ ಹೆಚ್ಚಳ ಮಾಡಿರುವುದು ಜನರ ಮೇಲೆ ಪರಿಣಾಮ ಬೀರಲಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

Waqf Bill ರಾಜ್ಯಸಭೆಯಲ್ಲೂ ಪಾಸ್: ಇಲ್ಲಿದೆ ವಿವರ