ತಮಿಳುನಟ ಸಿಲಂಬರಸನ್ ( ಸಿಂಬು) ಅವರ ಇನ್ನೋವಾ ಕಾರು ಢಿಕ್ಕಿ ಹೊಡೆದು ದಾರಿಹೋಕ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.
ಮಾಧ್ಯಮಗಳ ವರದಿಯ ಪ್ರಕಾರ, ಮಾರ್ಚ್ 18 ರಂದು ಆಸ್ಪತ್ರೆಗೆ ಇನ್ನೋವಾದಲ್ಲಿ ಸಿಂಬು ಅವರ ತಂದೆ ಟಿ.ರಾಜೇಂದ್ರ ಅವರು ತಮ್ಮ ಮೊಮ್ಮಗಳೊಂದಿಗೆ ತೆರಳುತ್ತಿದ್ದ ವೇಳೆ ಅವಘಡ ನಡೆದಿದೆ.
ಘಟನೆ ನಡೆದ ವೇಳೆ ಕಾರನ್ನು ಅವರ ಚಾಲಕ ಸೆಲ್ವಂ ಚಲಾಯಿಸುತ್ತಿದ್ದರು ರಾತ್ರಿ 7 ಗಂಟೆ ವೇಳೆ ಎಲಂಗೋ ಸಲೈ-ಪೋಸ್ ರಸ್ತೆಯ ತಿರುವಿನಲ್ಲಿ ರಸ್ತೆ ದಾಟುತ್ತಿದ್ದ 70 ವರ್ಷದ ಮುನುಸ್ವಾಮಿ ಎಂಬ ದಾರಿಹೋಕರಿಗೆ ಕಾರು ಢಿಕ್ಕಿ ಹೊಡೆದು ಅವರು ಸಾವನ್ನಪ್ಪಿದ್ದಾರೆ. ಘಟನೆ ತಡವಾಗಿ ಸುದ್ದಿಯಾಗುತ್ತಿದೆ.
ಮೃತ ಮುನುಸ್ವಾಮಿ ಅಂಗವಿಕಲರಾಗಿದ್ದು, ರಸ್ತೆಯಲ್ಲಿ ತೆವಳುತ್ತಾ ಸಾಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಗಂಭೀರವಾಗಿ ಗಾಯಗೊಂಡ ವರನ್ನು ರಾಜೇಂದ್ರ ಅವರು ಕಾರಿನಿಂದ ಕೆಳಗಿಳಿದು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತನ್ನ ಚಾಲಕನನ್ನು ಹೇಳಿದ್ದಾರೆ. ಸಿಂಬು ಅವರಿಗಾಗಿ ಮತ್ತೊಂದು ಕಾರನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಮರುದಿನ ಚಾಲಕನನ್ನು ಬಂಧಿಸಲಾಗಿದೆ.
ಘಟನೆಯ ಕುರಿತು ಸುಳ್ಳು ಮಾಹಿತಿಗಳನ್ನು ಹಬ್ಬಲಾಗುತ್ತಿದೆ. ಅವಘಡ ನಡೆದ ವೇಳೆ ಸಿಂಬು ಅವರು ಕಾರಿನಲ್ಲಿರಲಿಲ್ಲ, ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಅವರ ಕಚೇರಿತಮಿಳು ನಟ ಸಿಲಂಬರಸನ್ ( ಸಿಂಬು) ಅವರ ಇನ್ನೋವಾ ಕಾರು ಢಿಕ್ಕಿ ಹೊಡೆದು ದಾರಿಹೋಕ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.
ಮಾಧ್ಯಮಗಳ ವರದಿಯ ಪ್ರಕಾರ, ಮಾರ್ಚ್ 18 ರಂದು ಆಸ್ಪತ್ರೆಗೆ ಇನ್ನೋವಾದಲ್ಲಿ ಸಿಂಬು ಅವರ ತಂದೆ ಟಿ.ರಾಜೇಂದ್ರ ಅವರು ತಮ್ಮ ಮೊಮ್ಮಗಳೊಂದಿಗೆ ತೆರಳುತ್ತಿದ್ದ ವೇಳೆ ಅವಘಡ ನಡೆದಿದೆ.
ಘಟನೆ ನಡೆದ ವೇಳೆ ಕಾರನ್ನು ಅವರ ಚಾಲಕ ಸೆಲ್ವಂ ಚಲಾಯಿಸುತ್ತಿದ್ದರು ರಾತ್ರಿ 7 ಗಂಟೆ ವೇಳೆ ಎಲಂಗೋ ಸಲೈ-ಪೋಸ್ ರಸ್ತೆಯ ತಿರುವಿನಲ್ಲಿ ರಸ್ತೆ ದಾಟುತ್ತಿದ್ದ 70 ವರ್ಷದ ಮುನುಸ್ವಾಮಿ ಎಂಬ ದಾರಿಹೋಕರಿಗೆ ಕಾರು ಢಿಕ್ಕಿ ಹೊಡೆದು ಅವರು ಸಾವನ್ನಪ್ಪಿದ್ದಾರೆ. ಘಟನೆ ತಡವಾಗಿ ಸುದ್ದಿಯಾಗುತ್ತಿದೆ.
ಮೃತ ಮುನುಸ್ವಾಮಿ ಅಂಗವಿಕಲರಾಗಿದ್ದು, ರಸ್ತೆಯಲ್ಲಿ ತೆವಳುತ್ತಾ ಸಾಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಗಂಭೀರವಾಗಿ ಗಾಯಗೊಂಡ ವರನ್ನು ರಾಜೇಂದ್ರ ಅವರು ಕಾರಿನಿಂದ ಕೆಳಗಿಳಿದು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತನ್ನ ಚಾಲಕನನ್ನು ಹೇಳಿದ್ದಾರೆ. ಸಿಂಬು ಅವರಿಗಾಗಿ ಮತ್ತೊಂದು ಕಾರನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಮರುದಿನ ಚಾಲಕನನ್ನು ಬಂಧಿಸಲಾಗಿದೆ.
ಘಟನೆಯ ಕುರಿತು ಸುಳ್ಳು ಮಾಹಿತಿಗಳನ್ನು ಹಬ್ಬಲಾಗುತ್ತಿದೆ. ಅವಘಡ ನಡೆದ ವೇಳೆ ಸಿಂಬು ಅವರು ಕಾರಿನಲ್ಲಿರಲಿಲ್ಲ, ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಅವರ ಕಚೇರಿ ಹೇಳಿದೆ.