Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕಾಲು ಕೆರೆದು ಕೊಂಡು ಬಂದರೆ ತಮಿಳು ಸಿನಿಮಾ ಬ್ಯಾನ್ ಮಾಡುತ್ತೇವೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರು ಹೊರ ವಲಯದ ಆನೇಕಲ್ ನಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವ ರು, ಬರೀ ಪಾದಯಾತ್ರೆ ಮಾಡಿದ್ರೆ ಸಾಧ್ಯವಿಲ್ಲ.
ನೀವೇನಾದ್ರೂ ಮತ್ತೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದರೆ, ಇಡೀ ಕರ್ನಾಟಕದ ಉದ್ದಗಲಕ್ಕೂ ತಮಿಳುನಾಡು ಗಡಿ ಬಂದ್ ಮಾಡು ತ್ತೇವೆ. ಒಂದು ವಾಹನವನ್ನೂ ಒಳಗಡೆ ಬಿಡೋದಿಲ್ಲ. ತಮಿಳು ಚಿತ್ರಗಳನ್ನು ಬಂದ್ ಮಾಡುತ್ತೇವೆ. ನಿಮ್ಮ ವಿರುದ್ಧ ಇಲ್ಲಿ ಸತ್ಯಾಗ್ರ ಹದ ಮೂಲಕ ಗಡಿನಾಡು ಚಳುವಳಿಯನ್ನು ಮಾಡುತ್ತಿದ್ದೇವೆ' ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.