Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಿತ್ರಕಲಾ ಪರಿಷತ್ತಿನಲ್ಲಿ ದಸರಾ ಗೊಂಬೆಗಳ ವಿಶೇಷ ಪ್ರದರ್ಶನ

ಚಿತ್ರಕಲಾ ಪರಿಷತ್ತಿನಲ್ಲಿ ದಸರಾ ಗೊಂಬೆಗಳ ವಿಶೇಷ ಪ್ರದರ್ಶನ
bangalore , ಶುಕ್ರವಾರ, 8 ಅಕ್ಟೋಬರ್ 2021 (16:56 IST)
chitrakala parishath
ನಾಡ ಹಬ್ಬ ದಸರಾ ಅಂಗವಾಗಿ ಇಂದಿನಿಂದ 10 ದಿನಗಳ ಕಾಲ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ದಸರಾ ಗೊಂಬೆಗಳ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ನಟಿ ಸುಶ್ಮಿತಾ ಸಿದ್ದಪ್ಪ ಹಾಗೂ ಸಿಂಧೂ ಗೌಡ ಚಾಲನೆ ನೀಡಿದರು. 
 
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ನಟಿ ಸುಶ್ಮಿತಾ ಸಿದ್ದಪ್ಪ ಮಾತನಾಡಿ, ಚಿತ್ತಾರ ಹಾಗೂ ಗ್ರಾಂಡ್‌ ಫ್ಲಿಯಾ ಮಾರ್ಕೇಟ್‌ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ಮಾರಾಟ ಮೇಳದಲ್ಲಿ ದಸರಾ ಆಲಂಕಾರಕ್ಕೆ ಬೇಕಾಗಿರುವ ವಿಶೇಷ ಗೊಂಬೆಗಳು ಹಾಗೂ ಇನ್ನಿತರ ವಸ್ತುಗಳ ಒಂದೇ ವೇದಿಕೆಯ ಅಡಿಯಲ್ಲಿ ದೊರೆಯಲಿವೆ. ಪ್ರತಿ ದಸರಾ ಸಂಧರ್ಭದಲ್ಲೂ ತಮ್ಮ ಬೊಂಬೆಗಳ ಸಂಗ್ರಹದಲ್ಲಿ ಹೊಸತನ ಕಾಪಾಡುವ ನಿಟ್ಟಿನಲ್ಲಿ ಗ್ರಾಹಕರು ಕೆಲವೊಂದು ಗೊಂಬೆಗಳನ್ನು ಖರೀದಿಸುವುದು ನಡೆದು ಬಂದಿರುವ ಸಂಪ್ರದಾಯ. ಇಂತಹ ಸಂಪ್ರದಾಯಕ್ಕೆ ಪುಷ್ಠಿ ಕೊಡುವ ನಿಟ್ಟಿನಲ್ಲಿ ಹಾಗೂ ದಸರಾ ಹಬ್ಬಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಒಂದೇ ವೇದಿಕೆಯಡಿಯಲ್ಲಿ ಕೊಂಡುಕೊಳ್ಳಬಹುದಾಗಿದೆ ಎಂದು ಹೇಳಿದರು. 
 
ನಟಿ ಸಿಂಧೂ ಗೌಡ ಮಾತನಾಡಿ, ನಗರದ ಹೃದಯಭಾಗದಲ್ಲಿ ಆಯೋಜಿಸಲಾಗಿರುವ ಈ ಮೇಳದಲ್ಲಿ ಎಲ್ಲಾ ರೀತಿಯ ಗೊಂಬೆಗಳನ್ನು ನೋಡಬಹುದಾಗಿದೆ. ಅಲ್ಲದೆ, ನಮಗಿಷ್ಟವಾದವುಗಳನ್ನು ಖರೀದಿಸಬಹುದಾಗಿದೆ. ಇದಲ್ಲದೆ, ಹಬ್ಬಕ್ಕೆ ಬೇಕಾಗುವಂತಹ ಉಡುಪ ಹಾಗೂ ಉಡುಗೊರೆಗಳು ಇಲ್ಲಿ ಲಭ್ಯವಿವೆ. ಕರಕುಶಲ ಕರ್ಮಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜನರು ಇಂತಹ ಮೇಳಕ್ಕೆ ಭೇಟಿ ನೀಡಿ ಖರೀದಿಸಬೇಕು ಎಂದು ಕರೆ ನೀಡಿದರು.
 
ಅಕ್ಟೋಬರ್‌ 8 ರಿಂದ 17 ರ ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ‌ ಇಂಡಿಯನ್‌ ಆರ್ಟಿಸನ್ಸ್‌ ಕರಕುಶಲ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. 80 ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರುಗಳು ತಮ್ಮ ಕಲೆಯನ್ನು ಪ್ರದರ್ಶನಕ್ಕೆ ಇಟ್ಟಿದ್ದಾಋೆ. ಮಣ್ಣು, ಕಲ್ಲು, ಮರ ಹಾಗೂ ಲೋಹಗಳನ್ನು ಬಳಸಿ ತಯಾರಿಸಿರುವ ಗೊಂಬೆಗಳು ಪ್ರಮುಖ ಆಕರ್ಷಣೆಯಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಬ್ಬದ ಸೀಸನ್ ನಲ್ಲಿ 40 ಪಟ್ಟು ಪ್ರಗತಿ ಸಾಧಿಸಿದ ಫ್ಲಿಪ್ ಕಾರ್ಟ್ ಶಾಪ್ಸಿ