Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಾಲ್ಯ ವಿವಾಹ ತಡೆಗೆ ಕಠಿಣ ಕ್ರಮ ಕೈಗೊಳ್ಳಿ ಪಾಟೀಲ್ ಆಗ್ರಹ

ಬಾಲ್ಯ ವಿವಾಹ ತಡೆಗೆ ಕಠಿಣ ಕ್ರಮ ಕೈಗೊಳ್ಳಿ ಪಾಟೀಲ್ ಆಗ್ರಹ
Bangalore , ಶನಿವಾರ, 14 ಜನವರಿ 2017 (10:24 IST)
ಬಾಲ್ಯ ವಿವಾಹಕ್ಕೆ ಹಲವಾರು ಕಾರಣಗಳಿವೆ,ಈ ಹಿನ್ನೆಲೆಯಲ್ಲಿ ನನ್ನ ವರದಿಯ ಅನುಷ್ಠಾನಕ್ಕೆ ಅನುಕೂಲವಾದ ಸೂಕ್ತ ಆದೇಶಗಳನ್ನು  ಸರ್ಕಾರ ಹೊರಡಿಸಿದೆ, ಇದಕ್ಕಾಗಿ ನಾನು ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಸುಪ್ರಿಂಕೋರ್ಟು ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ ಪಾಟೀಲ್ ಅವರು ಹೇಳಿದರು.
 
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಭೆಯಲ್ಲಿ ಬಾಲ್ಯ ವಿವಾಹ ತಡೆ ಕಾಯ್ದೆಯ ಅನುಷ್ಠಾನಗಳು ಮತ್ತು ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ ಪಾಟೀಲ್  ಸಮಿತಿ ವರದಿಯ ಶಿಫಾರಸ್ಸುಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. 2011 ರಿಂದ 2017ರವರೆಗೆ ಬಾಲ್ಯ ವಿವಾಹಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಈ ದಿಸೆಯಲ್ಲಿ ಇನ್ನೂ ಗಟ್ಟಿಯಾದ ಕ್ರಮಗಳು ಆಗಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ ಪಾಟೀಲ್ ನುಡಿದರು.
 
ಕಠಿಣ ಕ್ರಮ ಅಗತ್ಯ: ಬಾಲ್ಯ ವಿವಾಹಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಇನ್ನೂ ಗಟ್ಟಿಯಾದ ಕ್ರಮಗಳು ಆಗಬೇಕಾಗಿದೆ, ಸರ್ಕಾರದ ಆದೇಶಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ವಿವಿಧ ಇಲಾಖೆಗಳ ಕೆಳ ಹಂತದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸ ಬೇಕು, ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಬದ್ಧತೆ ಮತ್ತು ಪ್ರಾಮಾಣಿಕತೆ ಇರಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ ಪಾಟೀಲ್  ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಾನ್ ಕಾರ್ಡ್ ಹೊಸ ರೂಪದಲ್ಲಿ ಬಂದಿದೆ