ಇನ್ನು ಮುಂದೆ ಪಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರಿಗೆ ಬದಲಾಯಿಸಲು ಅಸಾಧ್ಯವಾದ..ಹೊಸ ಲುಕ್ ಇರುವಂತ ಪಾನ್ ಕಾರ್ಡ್ ಸಿಗಲಿದೆ. ಜನವರಿ 1ರಿಂದ ಈ ಹೊಸ ಕಾರ್ಡ್‍ಗಳನ್ನು ನೀಡುತ್ತಿದ್ದೇವೆಂದು..ಇವುಗಳಲ್ಲಿನ ವಿವರಳು, ಇಂಗ್ಲಿಷ್, ಹಿಹ್ಂದಿಯಲ್ಲಿ ಇರಲಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಡುಗಳನ್ನು ಎನ್‍ಎಸ್‍ಡಿಎಲ್, ಯುಟಿಐಐಟಿಎಸ್ಎಲ್ ಮುದ್ರಿಸಲಿವೆ ಎಂದು ವಿವರ ನೀಡಿದ್ದಾರೆ. ಈಗಾಗಲೆ ಕಾರ್ಡ್ ಇರುವವರು ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಕಾರ್ಡಿನಲ್ಲಿ ಕ್ವಿಕ್ ರೆಸ್ಪಾನ್ಸ್ ಕೋಡ್ ಸೌಲಭ್ಯವನ್ನು ಜಾರಿಗೆ ತಂದಿದ್ದೇವೆಂದು...ಇದು ತಪಾಸಣೆಗೆ ಸಹಕಾರಿಯಾಗಲಿದೆ. ಈ ಕಾರ್ಡನ್ನು ನಕಲು ಮಾಡುವುದು ಸಾಧ್ಯವಾಗದಂತೆ ಟ್ಯಾಂಪರ್ ಫ್ರೂಪ್ ಮಾಡಲಾಗಿದೆ. ಸದ್ಯಕ್ಕೆ ದೇಶದಲ್ಲಿ 25 ಕೋಟಿ ಮಂದಿಗೂ ಅಧಿಕ ಜನರ ಬಳಿ ಪಾನ್ ಕಾರ್ಡ್ ಇದೆ. ಈ ವರ್ಷ 2.5 ಅರ್ಜಿಗಳು ಬರುತ್ತಿವೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.