Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಾಳೆಯಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಟೇಕಾಫ್, ಲ್ಯಾಂಡಿಂಗ್

ನಾಳೆಯಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಟೇಕಾಫ್, ಲ್ಯಾಂಡಿಂಗ್
ಬೆಂಗಳೂರು , ಸೋಮವಾರ, 11 ಸೆಪ್ಟಂಬರ್ 2023 (13:45 IST)
ಬೆಂಗಳೂರು : ಮಂಗಳವಾರದಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2ನಿಂದ ಟೇಕಾಫ್ ಮತ್ತು ಲ್ಯಾಂಡಿಂಗ್ ಆಗಲಿದೆ. ಅಂತಾರಾಷ್ಟ್ರೀಯ ವಿಮಾನಗಳ ಜೊತೆ ದೇಶೀಯ ವಿಮಾನಗಳು ಸಹ ಈ ಟರ್ಮಿನಲ್ನಿಂದಲೇ ಕಾರ್ಯಾಚರಣೆ ನಡೆಸಲಿವೆ.

ಈ ಸಂಬಂಧ ಬಿಎಲ್ಆರ್ ಏರ್ಪೋರ್ಟ್ ಟ್ವೀಟ್ ಮಾಡಿದ್ದು, ಸೆ.12ರ ಬೆಳಗ್ಗೆ 10:45 ರಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಜೊತೆ ದೇಶೀಯ ಸೇವೆ ನೀಡುವ ಏರ್ ಏಷ್ಯಾ, ಏರ್ ಇಂಡಿಯಾ, ಸ್ಟಾರ್ ಏರ್, ವಿಸ್ತಾರಾ ಕಂಪನಿಗಳ ವಿಮಾನ ಕಾರ್ಯಾಚರಣೆ ಟರ್ಮಿನಲ್ 2 ನಿಂದ ಆಗಲಿದೆ. ಆಕಾಸಾ ಏರ್, ಅಲೈಯನ್ಸ್ ಏರ್, ಇಂಡಿಗೋ, ಸ್ಪೈಸ್ ಜೆಟ್ ವಿಮಾನಗಳು ಟರ್ಮಿನಲ್ 1 ರಲ್ಲಿ ಟೇಕಾಫ್, ಲ್ಯಾಂಡಿಂಗ್ ಆಗಲಿದೆ ಎಂದು ತಿಳಿಸಿದೆ.

ನಿಗದಿ ಪ್ರಕಾರ ಆಗಸ್ಟ್ 31 ರಿಂದಲೇ ಟರ್ಮಿನಲ್ 2 ರಿಂದ ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ಆರಂಭವಾಗಬೇಕಿತ್ತು. ಆದರೆ ತಾಂತ್ರಿಕ ಕಾರಣ ಮತ್ತು ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಕೊನೆ ಕ್ಷಣದಲ್ಲಿ ವಿಮಾನ ನಿಲ್ದಾಣದ ನಿರ್ವಹಣಾ ಮಂಡಳಿ ಕಾರ್ಯಾಚರಣಾ ದಿನಾಂಕವನ್ನು ಮುಂದೂಡಿತ್ತು. 

ಟರ್ಮಿನಲ್-2 ಅನ್ನು ಗಾರ್ಡನ್ ಟರ್ಮಿನಲ್ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ದೊಡ್ಡ ಕೃತಕ ಒಳಾಂಗಣ ಉದ್ಯಾನವನ್ನು ಹೊಂದಿದೆ. ಬೆಂಗಳೂರನ್ನು ಭಾರತದ ʼಗಾರ್ಡನ್ ಸಿಟಿʼಎಂದು ಕರೆಯಲಾದ ಬಿರುದನ್ನು ಎತ್ತಿಹಿಡಿಯಲಿದೆ ಎಂದೇ ವ್ಯಾಖ್ಯಾನಿಸಲಾಗಿದೆ. ಪ್ರಯಾಣಿಕರಿಗೆ ಉದ್ಯಾನವನದ ಅನುಭವ ನೀಡಲು ಕೃತಕ ಮರಗಿಡಗಳು, ಹಕ್ಕಿಗಳ ಕಲರವ-ಚಿಲಿಪಿಲಿ ನಾದವನ್ನು ಇಲ್ಲಿ ಕೇಳಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ರ್ಯಾಪಿಡೋ ವಿರುದ್ಧ ಹೆಚ್ಚಾಯ್ತು ಹೋರಾಟದ ಕಿಚ್ಚು..!