ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಾಕತ್ತು ಇರೋದಕ್ಕೆ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ.
ಹೀಗಂತ ಕೃಷಿ ಸಚಿವ ಬಿ.ಸಿ.ಪಾಟೀಲ್, ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
ಯಡಿಯೂರಪ್ಪಗೆ ತಾಕತ್ತು ಇಲ್ಲಾ ಅಂದಿದ್ದರೆ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗುತ್ತಿರಲಿಲ್ಲ.
ಯಡಿಯೂರಪ್ಪನ ತಾಕತ್ತು ಏನು ಎಂಬುವುದು ರಾಜ್ಯದ ಜನತೆಗೆ ಗೊತ್ತಾಗಿದೆ. ಅವರಿಗೆ ತಾಕತ್ತು ಇರೋದಕ್ಕೆ 17 ಜನರು ಹೋಗಿದ್ದು, 12 ಜನ ಗೆದ್ದ ಬಂದಿದ್ದು, 10 ಜನ ಮಂತ್ರಿಯಾಗಿದ್ದು, ಮತ್ತೆರಡು ಜನರು ಎಂ.ಎಲ್.ಸಿ. ಆಗಿದ್ದು. ಮುಂದಿನ ದಿನಗಳಲ್ಲಿ ಎಚ್.ವಿಶ್ವನಾಥ ಅವರಿಗೆ ಸೂಕ್ತ ಸ್ಥಾನ ನೀಡಲಿದ್ದಾರೆ ಎಂದರು.
ಯಡಿಯೂರಪ್ಪ ಅವರಿಗೆ ಧಮ್ ಇಲ್ಲದಿದ್ದರೆ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ಸಿ ಎಲ್ ಪಿ ನಾಯಕನಾಗಿರಬೇಕಿತ್ತು ಎಂದರು.