ನಕಲಿ ರಸಗೊಬ್ಬರ ಅಥವಾ ನಕಲಿ ಸಾವಯವ ಗೊಬ್ಬರದ ಕಾಟ ವಿಪರೀತವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಕಲಿ ರಸಗೊಬ್ಬರ ಅಥವಾ ನಕಲಿ ಸಾವಯವ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಹೀಗಂತ ಉತ್ತರಕನ್ನಡ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ. ನಕಲಿ ರಸಗೊಬ್ಬರವನ್ನು ವಾಹನಗಳಲ್ಲಿ ತುಂಬಿಕೊಂಡು ಹಳ್ಳಿಗಳಿಗೆ ತಂದು ಮಾರಾಟ ಮಾಡುತ್ತಿದ್ದಾರೆ.
ಕೆಲವು ಅಂಗಡಿಗಳಲ್ಲಿ ಮಾರುತ್ತಿದ್ದರೆ ಕೂಡಲೇ ರೈತರು ಕೃಷಿ ಇಲಾಖೆಗೆ ಮಾಹಿತಿ ನೀಡಬೇಕು. ರೈತರು ಅಂಗಡಿಗಳಿಂದ ರಸಗೊಬ್ಬರವನ್ನು ಖರೀದಿಸುವಾಗ ಪರಿಶೀಲಿಸಿ ಖರೀದಿ ಮಾಡಬೇಕು. ನಕಲಿ ರಸಗೊಬ್ಬರ ಖರೀದಿಸಿ ಮೋಸ ಹೋಗಬಾರದು ಎಂದು ಎಚ್ಚರಿಸಿದ್ದಾರೆ.