ರಾಜ್ಯದ ಕುಡುಕರು ಇನ್ಮುಂದೆ ಬಾರ್ ಗಳನ್ನು, ವೈನ್ ಸ್ಟೋರ್ ಗಳನ್ನು ಹುಡುಕಿಕೊಂಡು ಅಲೆದಾಡಬೇಕಿಲ್ಲ. ಏಕೆಂದರೆ ಅಬಕಾರಿ ಸಚಿವ ನಾಗೇಶ್ ಹೇಳಿಕೆ ನೀಡಿದ್ದು, ಇನ್ಮುಂದೆ ಮನೆ ಬಾಗಿಲಿಗೇ ಮದ್ಯ ಪೂರೈಕೆ ಮಾಡ್ತೇವೆ ಎಂದಿದ್ದಾರೆ.
ಅಬಕಾರಿ ಇಲಾಖೆಯ ಮುಂದೆ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡೋ ಚಿಂತನೆ ಇದೆ. ಹೀಗಂತ ಅಬಕಾರಿ ಸಚಿವ ನಾಗೇಶ್ ಹೇಳಿಕೆ ನೀಡಿದ್ದು, ಇದೀಗ ಚರ್ಚೆಗೆ ಗ್ರಾಸವಾಗುತ್ತಿದೆ.
ಸಂಚಾರಿ ವೈನ್ ಶಾಪ್ ಗಳ ಮದ್ಯ ಮನೆ ಬಾಗಿಲಿಗೆ ಬರಲಿದೆ. ಇಂತಹ ಒಂದು ಚಿಂತನೆ ಸರಕಾರದ ಮಟ್ಟದಲ್ಲಿ ನಡೆಯುತ್ತಿದೆ ಅಂತ ತಿಳಿಸಿದ್ರು.
ಪ್ರಸಕ್ತ ವರ್ಷ ಇಲಾಖೆಯಿಂದ 21 ಸಾವಿರ ಕೋಟಿ ಗುರಿ ನಿಗದಿ ಪಡಿಸಲಾಗಿದ್ದು, ಗುರಿ ಸಾಧಿಸುತ್ತೇವೆ ಅಂತ ಸಚಿವರು ಹೇಳಿಕೊಂಡಿದ್ದಾರೆ.