ಜೆರುಸಲೇಂ : ಭಾರತದಲ್ಲಿ ಮದ್ಯ ನಿಷೇಧ ಮಾಡಬೇಕೆಂದು ಪಣತೊಟ್ಟ ಮಹಾತ್ಮ ಗಾಂಧಿ ಅವರ ಚಿತ್ರವನ್ನು ಇಸ್ರೇಲ್ ನ ಮದ್ಯ ಕಂಪೆನಿಯೊಂದು ಮದ್ಯದ ಬಾಟಲಿ ಪ್ರಕಟಿಸಿ, ಈಗ ಭಾರತೀಯರಲ್ಲಿ ಕ್ಷಮೆ ಕೋರಿದೆ.
ಇಸ್ರೆಲ್ ನ 71ನೇ ಸ್ವಾತಂತ್ರ್ಯ ದಿನಾಚರಣೆ ಸ್ಮರಣಾರ್ಥವಾಗಿ ಮಲ್ಕಾ ಬಿಯರ್ ಕಂಪೆನಿಯು ಮಹಾತ್ಮ ಗಾಂಧಿ ಅವರ ಚಿತ್ರವನ್ನು ಮದ್ಯದ ಬಾಟಲಿ ಮೇಲೆ ಪ್ರಕಟಿಸಿತ್ತು. ಈ ಬಗ್ಗೆ ಭಾರತೀಯರು ಬೇಸರ ವ್ಯಕ್ತಪಡಿಸಿದ್ದು, ಮಂಗಳವಾರ ನಡೆದ ರಾಜ್ಯಸಭೆಯಲ್ಲಿ ಇದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ವಿದೇಶ ವ್ಯವಹಾರ ಸಚಿವ ಎಸ್. ಜೈಶಂಕರ್ ಅವರಿಗೆ ರಾಜ್ಯಸಭೆ ಅಧ್ಯಕ್ಷ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೂಚಿಸಿದ್ದರು.
ಆದರೆ ಇದೀಗ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಇಸ್ರೇಲ್ ಲಿಕ್ಕರ್ ಕಂಪೆನಿಯ ಬ್ರಾಂಡ್ ಮ್ಯಾನೇಜರ್ ಗಿಲ್ಯಾಡ್ ಡ್ರಾರ್ ಅವರು, 'ಮಹಾತ್ಮ ಗಾಂಧಿಯವರ ಚಿತ್ರವನ್ನು ಲಿಕ್ಕರ್ ಬಾಟಲ್ ನಲ್ಲಿ ಹಾಕಿರುವ ಕಾರಣ ಭಾರತ ಸರಕಾರ ಮತ್ತು ಸಮಸ್ತ ಭಾರತೀಯರ ಮನಸ್ಸಿಗೆ ನೋವಾಗಿರುವುದಕ್ಕೆ ಮಾಲ್ಕಾ ಬಿಯರ್ ಕ್ಷಮೆಯಾಚಿಸುತ್ತದೆ' ಎಂದು ತಿಳಿಸಿದ್ದಾರೆ.