ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್`ಐಟಿ ತನಿಖೆ ತೀವ್ರಗೊಳಿಸಿದೆ. ಸಿಸಿಟಿವಿ ಮತ್ತು ಫೋನ್ ಕರೆಗಳ ಲೊಕೇಶನ್ ಆಧರಿಸಿ ಪೊಲೀಸರು ಆಂಧ್ರ ಮೂಲದ ಅನುಮಾನಾಸ್ಪದ ವ್ಯಕ್ತಿಯನ್ನ ಬಂಧಿಸಿ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಗೌರಿ ಲಂಕೇಶ್ ಅವರ ಗಾಂಧಿಬಜಾರ್ ಕಚೇರಿಯಿಂದ ಅವರ ರಾಜರಾಜೇಶ್ವರಿ ನಗರದ ಮನೆವರೆಗಿನ ಸಿಸಿಟಿವಿ ದೃಶ್ಯಾವಳಿ. 3 ತಿಂಗಳ ಕಾಲ ಅವರು ಸಂಚರಿಸಿದ ಮಾರ್ಗದ 1800 ಸಿಸಿಟಿವಿ ವಿಡಿಯೋಗಳನ್ನ ವಶಕ್ಕೆ ಪಡೆದ ಎಸ್ಐಟಿ ವಿಚಾರಣೆ ನಡೆಸುತ್ತಿದೆ. ಇದರ ಜೊತೆಗೆ ಗೌರಿ ಲಂಕೇಶ್ ಮನೆ ಮತ್ತು ಕಚೇರಿ ಬಳಿ ಮೊಬೈಲ್ ಲೊಕೇಶನ್ ಮಾಹಿತಿ ಆಧರಿಸಿ ತನಿಖೆ ನಡೆಸುತ್ತಿದೆ.
ಗೌರಿ ಲಂಕೇಶ್ ಹತ್ಯೆಯಾದ ಕೆಲವೇ ನಿಮಿಷಗಳಲ್ಲಿ ಮನೆಯ ಸಮೀಪದ ರಸ್ತೆಯಲ್ಲಿ ಸ್ಕೂಟಿಯಲ್ಲೊಬ್ಬ ಅನುಮಾನಾಸ್ಪದ ವ್ಯಕ್ತಿ ಹೋಗುತ್ತಿದ್ದ. ಅಲ್ಲಿ ಪತ್ತೆಯಾದ ಮೊಬೈಲ್ ಲೊಕೇಶನ್, ಅವರ ಗಾಂಧಿಬಜಾರ್`ನ ಕಚೇರಿ ಬಳಿಯೂ ಪತ್ತೆಯಾಗಿದೆ. 3 ತಿಂಗಳಿಂದ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿ ಹಲವು ಬಾರಿ ಮೊಬೈಲ್ ಸ್ವಿಚ್ ಆಫ್ ಸ್ವಿಚ್ ಆನ್ ಮಾಡಿದ್ದಾನೆಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ