ಬರದಿಂದ ನಲುಗಿದ್ದ ಊರಿನಲ್ಲಿ ಇದೀಗ ಸಂತಸ ಮನೆ ಮಾಡಿದೆ.
ಬರೋಬ್ಬರಿ ಎರಡು ದಶಕಗಳ ನಂತರ ಆ ಪ್ರದೇಶದಲ್ಲಿ ಕೆರೆಕೋಡಿಯಾಗಿರೋದು ಅನ್ನದಾತರಲ್ಲಿ ಹರ್ಷಕ್ಕೆ ಕಾರಣವಾಗಿದೆ.
ಮಂಡ್ಯದ ನಾಗಮಂಗಲ ಸಮೀಪದ ದೇವಲಾಪುರ ಕೆರೆ ಸುಮಾರು 20 ವರುಷಗಳ ನಂತರ ಕೆರೆಕೊಡಿಯಾಗಿದೆ.
ಬರಗಾಲದಲ್ಲಿ ನಲುಗಿಹೋಗಿದ್ದ ಈ ಪ್ರದೇಶದಲ್ಲಿ ದೇವಲಾಪುರ ಕೆರೆ ಇದುವರೆಗೆ ಮಳೆಯಾಗಿದ್ದರೂ ತುಂಬಿರಲಿಲ್ಲ.
ಈಗ ಹೇಮಾವತಿ ಜಲಶಾಯದಿಂದ ನೀರುಬಿಟ್ಟಿರೋದ್ರಿಂದ ಕೆರೆ ಭರ್ತಿಯಾಗಿದೆ. ಸಹಜವಾಗಿಯೇ ರೈತರು ಹರ್ಷಗೊಂಡಿದ್ದಾರೆ.