Select Your Language

Notifications

webdunia
webdunia
webdunia
webdunia

ನಂಗ್ಯಾಕೆ ಪುರುಷತ್ವ ಪರೀಕ್ಷೆ, ನಾನು ಗಂಡಸು ಗೊತ್ತಾಗಲ್ವಾ ಪೊಲೀಸರ ಮುಂದೆ ಸೂರಜ್ ರೇವಣ್ಣ ಕ್ಯಾತೆ

Suraj Revanna

Krishnaveni K

ಬೆಂಗಳೂರು , ಶುಕ್ರವಾರ, 28 ಜೂನ್ 2024 (10:09 IST)
ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಎಂಎಲ್ ಸಿ ಸೂರಜ್ ರೇವಣ್ಣ ವಿಚಾರಣೆ ಸಂದರ್ಭದಲ್ಲಿ ಪೊಲೀಸರಿಗೆ ಅಸಹಕಾರ ತೋರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಯುವಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಸಿಐಡಿ ಅಧಿಕಾರಿಗಳು ಸೂರಜ್ ರೇವಣ್ಣರನ್ನು ವೈದ್ಯಕೀಯ ಪರೀಕ್ಷೆಗೆ ಕರೆತಂದಿದ್ದಾರೆ. ಸೂರಜ್ ಮೇಲೆ ಆರೋಪ ಮಾಡಿದ ಯುವಕನನ್ನೂ ಪರೀಕ್ಷೆಗೊಳಪಡಿಸಲಾಗಿದೆ. ಆದರೆ ತಮ್ಮನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸುತ್ತಿರುವುದಕ್ಕೆ ಸೂರಜ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೂರಜ್ ಗೆ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು. ಆದರೆ ಈ  ವೇಳೆ ಅವರು ಇದಕ್ಕೆ ತಕರಾರು ತೆಗೆದಿದ್ದಾರೆ. ನನಗೆ ಯಾಕೆ ಈ ಪರೀಕ್ಷೆಯಲ್ಲಾ ಮಾಡುತ್ತಿದ್ದೀರಿ ಎಂದು ಪೊಲೀಸರ ಮೇಲೆಯೇ ಕೂಗಾಡಿದ್ದಾರೆ ಎಂದು ತಿಳಿದುಬಂದಿದೆ. ವಿಚಾರಣೆ  ವೇಳೆಯೂ ಅವರು ಅಸಹಕಾರ ತೋರುತ್ತಿದ್ದಾರೆ ಎಂದು ವರದಿಯಾಗಿದೆ.

ನಾನು ಸಲಿಂಗ ಕಾಮಿಯಲ್ಲ. ಯಾರೋ ನನ್ನ ಬಗ್ಗೆ ರಾಜಕೀಯ ವೈಷಮ್ಯಕ್ಕಾಗಿ ಇಂತಹ ಆರೋಪ ಮಾಡಿದ್ದಾರೆ. ನನ್ನ ಮೇಲಿನ ಆರೋಪಗಳಲ್ಲಿ ನಿಜಾಂಶವಿಲ್ಲ ಎಂದು ಸೂರಜ್ ಹೇಳಿದ್ದಾರೆ. ಈ ರೀತಿಯ ಪರೀಕ್ಷೆ ನನ್ನ ಮೇಲೆ ಯಾಕೆ ಮಾಡಬೇಕು? ನಾನು ಗಂಡಸು ಗೊತ್ತಾಗುವುದಿಲ್ಲವೇ ಎಂದು ಕೂಗಾಡಿದ್ದಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ: ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ ಇಲ್ಲಿದೆ ಡೀಟೈಲ್ಸ್