Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಜಕಾರಣಿ ಆಗಲು ಮುಂದಾಗಿದ್ದ ರೌಡಿಶೀಟರ್ ಸುನೀಲ್ಗೆ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶಾಕ್ ನೀಡಿದ್ದಾರೆ. ಮೊನ್ನೆ ಬಿಜೆಪಿ ನಾಯಕರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಸೈಲೆಂಟ್ ಸುನೀಲ ಬಿಜೆಪಿ ಸೇರುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ವು. ಆದರೆ ಇದೀಗ ಸೈಲೆಂಟಾಗಿಯೇ ಸುನೀಲನಿಗೆ ರಾಜ್ಯ ಬಿಜೆಪಿ ಗುನ್ನ ಕೊಟ್ಟಿದೆ. ಬಿಜೆಪಿ ಸೇರಲು ಸೈಲೆಂಟ್ ಸುನೀಲನಿಗೆ ಅವಕಾಶವಿಲ್ಲ, ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ. ಕಟೀಲ್ ಅವರು ಸೈಲೆಂಟ್ ಸುನೀಲನ ಆಸೆಗೆ ತಣ್ಣೀರೆರಚಿದ್ದಾರೆ. ನಳಿನ್ ಕುಮಾರ್ ಕಟೀಲ್ ಮಾಧ್ಯಮಗಳ ಮುಂದೆ ಪ್ರಕಟಣೆ ಹೊರಡಿಸಿದ್ದಾರೆ.